Banner Ad

ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಅಂಕೋಲಾ ತಾಲೂಕಿನ ಮೇಲಿನ ಕೇರಿ ಕೊಡ್ಲಗದ್ಧೆಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ವಾರ್ಷಿಕೋತ್ಸವದ ಪ್ರಯುಕ್ತ ಫೆಬ್ರುವರಿ 22 ರಂದು ರವಿವಾರ ರಾತ್ರಿ 10.30 ಕ್ಕೆ ಮಾತೆಯರಿಂದ “ವಾಲಿ ಮೋಕ್ಷ” ಯಕ್ಷಗನ ತಾಳಮದ್ದಲೆ ನಡೆಯಿತು.

ಹಿಮ್ಮೇಳದಲ್ಲಿ ಮಂಜುನಾಥ ಹೆಗಡೆ ಕೂಡಿಗೆ, ಕುಮಾರಿ ಮೇಘಾ ಭಟ್ ಭಟ್ಲಗುಂಡಿ, ಮೃದಂಗ-ಎ.ಪಿ.ಪಾಠಕ್, ಚಂಡೆ-ನಾರಾಯಣ ಕೋಮಾರ್ ಭಾಗವಹಿಸಿದ್ದರು.

Banner Ad

ಮುಮ್ಮೇಳದಲ್ಲಿ ವಾಲಿಯಾಯಿ ಸುಜಾತಾ ಭಟ್ ಹುಳಸೇಮಕ್ಕಿ, ಶ್ರೀರಾಮನಾಗಿ ಶ್ರೀಶೈಲಾ ಭಟ್ ಕಡಾಸಿಗೆ, ಸುಗ್ರೀವನಾಗಿ ಜಯಾ ಗಾಂವಕರ್ ಚಿಟ್ಟೆಪಾಲ್ , ತಾರೆಯಾಗಿ ಜಯಶ್ರೀ ಭಟ್ ಕಟ್ಟಿನಹಕ್ಕಲು, ಹನುಮಂತನಾಗಿ-ಮಮತಾ ಭಟ್ ಸುರ್ಗಿಮನೆ, ಬ್ರಾಹ್ಮಣನಾಗಿ ಸವಿತಾ ಹೆಗಡೆ ಕೆರೆಗದ್ದೆ ರವರು ಭಾಗವಹಿಸಿದ್ದರು.

ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿತು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆಗಮಿಸಿದ ಎಲ್ಲ ಭಕ್ತಾದಿಗಳಿಗೆ ಮಹಾಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

Banner Ad