Banner Ad

ಸುದ್ದಿ ಕನ್ನಡ ವಾರ್ತೆ

ಬೆಂಗಳೂರು:ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಅತೀ ಪ್ರಮುಖ ಘಟ್ಟವಾಗಿರುವ ಎಸ್ ಎಸ್ ಎಲ್ ಸಿ (SSLC) ಪರೀಕ್ಷೆ ಮಾರ್ಚ್ 18 ರಿಂದ ರಾಜ್ಯಾದ್ಯಂತ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕೊನೆ ಕ್ಷಣದ ತಯಾರಿಯಲ್ಲಿ ತೊಡಗಿದ್ದಾರೆ.

Banner Ad

ಶಿಕ್ಷಣ ಇಲಾಖೆ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕತೆಯಿಂದ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದಲ್ಲದೆ ಸಿಸಿಟಿವಿ ಕಣ್ಣಾವಲಿನಲ್ಲಿ ಕಟ್ಟು ನಿಟ್ಟಿನ ಭದ್ರತೆಯೊಂದಿಗೆ ಪರೀಕ್ಷೆಗಳು ನಡೆಯಲಿವೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (KSEAB) 2026ನೇ ಸಾಲಿನ SSLC (10ನೇ ತರಗತಿ) ಬೋರ್ಡ್ ಪರೀಕ್ಷೆಗಳನ್ನು ಮಾರ್ಚ್ 18 ರಿಂದ ಏಪ್ರಿಲ್ 2, 2026 ರವರೆಗೆ ನಡೆಸಲಿದೆ. ಪರೀಕ್ಷೆಗಳು ಪ್ರತಿದಿನ ಬೆಳಿಗ್ಗೆ 10:15 ರಿಂದ ಮಧ್ಯಾಹ್ನ 1:30 ರವರೆಗೆ ನಡೆಯಲಿದ್ದು, ವಿದ್ಯಾರ್ಥಿಗಳು ಪತ್ರಿಕೆ ಓದಲು 15 ನಿಮಿಷಗಳ ಹೆಚ್ಚುವರಿ ಸಮಯವನ್ನು ಪಡೆಯಲಿದ್ದಾರೆ.

2026 SSLC ಪರೀಕ್ಷೆಯ ಪ್ರಮುಖ ವಿವರಗಳು:
ಪರೀಕ್ಷೆ ಆರಂಭ: ಮಾರ್ಚ್ 18, 2026
ಪರೀಕ್ಷೆ ಮುಕ್ತಾಯ: ಏಪ್ರಿಲ್ 2, 2026
ಪರೀಕ್ಷಾ ಸಮಯ: 10:15 AM – 01:30 PM (3 :15 ನಿಮಿಷಗಳು)
ಪರೀಕ್ಷಾ ವಿಧಾನ: ಆಫ್‌ಲೈನ್ (ಪೆನ್ ಮತ್ತು ಪೇಪರ್)
ಉಚಿತ ಬಸ್‌ ಪ್ರಯಾಣ: ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿ KSRTC/BMTC ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಪ್ರಮುಖ ಸೂಚನೆಗಳು:
ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಹಾಲ್ ಟಿಕೆಟ್ ಕಡ್ಡಾಯವಾಗಿ ತರಬೇಕು.
ಪರೀಕ್ಷಾ ಕೇಂದ್ರಕ್ಕೆ ಬೆಳಿಗ್ಗೆ 10:00 ರೊಳಗೆ ವರದಿ ಮಾಡುವುದು ಸೂಕ್ತ.
ಯಾವುದೇ ಎಲೆಕ್ಟ್ರಾನಿಕ್ ಸಾಧನಗಳಿಗೆ ಅವಕಾಶವಿಲ್ಲ .
ಹೆಚ್ಚಿನ ಮಾಹಿತಿಗಾಗಿ, ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ kseeb.karnataka.gov.in ಅನ್ನು ಪರಿಶೀಲಿಸಬಹುದು. ಮಾರ್ಚ್ 18, 2026 – ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (NCERT), ಸಂಸ್ಕೃತ.

ಮಾರ್ಚ್ 23, 2026 – ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ

ಮಾರ್ಚ್ 25, 2026- ಎರಡನೇ ಭಾಷೆ: ಇಂಗ್ಲಿಷ್, ಕನ್ನಡ

ಮಾರ್ಚ್ 28, 2026 – ಗಣಿತ, ಸಮಾಜಶಾಸ್ತ್ರ,

ಮಾರ್ಚ್ 30, 2026 – ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲಿಷ್, ಪರ್ಷಿಯನ್, ಅರೇಬಿಕ್, ತುಳು, ಉರ್ದು, ಸಂಸ್ಕೃತ, ಕೊಂಕಣಿ, NSQF ವಿಷಯಗಳು

ಏಪ್ರಿಲ್ 2, 2026 – ಸಮಾಜ ವಿಜ್ಞಾನ.

Banner Ad