ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಗಾಂಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮಾನ್ಯ ಶಾಸಕರ ಹಾಗೂ ತಾಲೂಕಾಡಳಿತದ ಸೂಚನೆಯ ಮೇರೆಗೆ ಸ್ವಚ್ಚತಾ ಶ್ರಮದಾನಕ್ಕೆ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಪ್ರವೀಣ ದೇಸಾಯಿರವರು ಚಾಲನೆ ನೀಡಿ ಸ್ವಚ್ಛ ಪರಿಸರ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ದಾರಿ ಎಂದು ಹೇಳಿದರು.
ಅಂಬರ್ಡಾ ಮಜರೆ ಯಿಂದ ದಿಗಲಂಬಾ, ದೇವಳ್ಳಿ, ಕೊಂಡಪಾ,ಗುಂದ್ರೆ ಬಸ್ ತಂಗುದಾಣ ಮತ್ತು ಈ ಎಲ್ಲಾ ಮಜರೆಗಳಲ್ಲಿ ರಸ್ತೆಯ ಎರಡು ಬದಿಗಳಲ್ಲಿ ಸ್ವಚ್ಚತಾ ಕಾರ್ಯ ಜರುಗಿತು. ಗಾಂಗೋಡಾ ಗ್ರಾಮದ ಶ್ರೀ ಸೋಮನಾಥ ದೇವಸ್ಥಾನದಿಂದ ಪ್ರಾರಂಭವಾಗಿ ಗಾಂಗೋಡಾ ಗ್ರಾಮದ ಶಾಲೆ ಅಂಗನವಾಡಿ, ಕರಂಬಾಳಿ, ಮಲ್ಕರ್ಣೇ, ಮಜರೆ ಮತ್ತು ಕುಂಬೇಲಿ ಚೆಕ್ ಪೋಸ್ಟ್ ಗಳಲ್ಲಿ ಸ್ವಚ್ಚತಾ ಕಾರ್ಯ ಕೈಗೊಳ್ಳಲಾಯಿತು.
ಚಾಪೋಲಿ ಕಾಳಸಾಯಿ ಗ್ರಾಮದ ರುಂಡಾಳಿ ಮಜರೆಯ ಘಟ್ಟದ ಮೇಲಿನಿಂದ ಪ್ರಾರಂಭವಾಗಿ ಶ್ರೀಪತಿ, ಚಾಪೋಲಿ, ಮಾಲಾಂಗಿಣಿ, ಹಲಕುಂಬಿ ಮಜರೆಗಳಲ್ಲಿ ಸ್ವಚ್ಚತಾ ಕಾರ್ಯವನ್ನು ಜರುಗಿತು. ಈ ಕಾರ್ಯಕ್ರಮದಲ್ಲಿ ಎಲ್ಲಾ ಗ್ರಾಮಗಳ ನಾಗರೀಕರು,ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಪ್ರವೀಣ ದೇಸಾಯಿ,ಗ್ರಾಮ ಪಂಚಾಯತ ಆಡಳಿತಾಧಿಕಾರಿಗಳಾದ ಯಲ್ಲಾಲಿಂಗ ಮಲ್ಲಾಪೂರ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ನಬಿಲಾಲ್ ಇನಾಮದಾರ ಭಾಗವಹಿಸಿದ್ದರು.
ಸ್ವಚ್ಚತಾ ಶ್ರಮದಾನಕ್ಕೆ 25 ಸಲಕೆ, 25 ಬುಟ್ಟಿ, 30 ಕಸಬರಿಗೆಗಳನ್ನು ದೇಣಿಗೆಯಾಗಿ ನೀಡಿದ ಶ್ರೀ ಉಳವಿ ಚೆನ್ನಬಸವೇಶ್ವರ ಟ್ರಸ್ಟ್, 3 ದಿನಗಳ ಕಾಲ ಸಂಗ್ರಹಿಸಿದ ಕಸವನ್ನು ಸಾಗಿಸಲು ವಾಹನದ ವ್ಯವಸ್ಥೆಯನ್ನು ಮಾಡಿದ ಗಾಂಗೋಡಾ ಗ್ರಾಮ ಪಂಚಾಯತದ ಮಾಜಿ ಅಧ್ಯಕ್ಷರಾದ ಪ್ರವೀಣ ದೇಸಾಯಿ ಹಾಗೂ ಮಾಸ್ಕ್ ಹ್ಯಾಂಡ್ ಗ್ಲೌಸ್ ಗಳನ್ನು ನೀಡಿದ ಆಡಳಿತಾಧಿಕಾರಿಗಳಾದ ಶ್ರೀ ಯಲ್ಲಾಲಿಂಗ ಮಲ್ಲಾಪೂರ ಈ ಎಲ್ಲಾ ದಾನಿಗಳನ್ನು ಪಿಡಿಓ ನಬಿಲಾಲ್ ಇನಾಮದಾರ ಗ್ರಾಮ ಪಂಚಾಯತ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
