Banner Ad

ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ತಾಲೂಕಿನ ಉಪಳೇಶ್ವರ ಬಳಿ ಬೈಕ್ ಸ್ಕಿಡ್‌ ಆಗಿ ಬಿದ್ದು ಸವಾರ ಮೃತಪಟ್ಟು, ಸಹ ಸವಾರ ಗಾಯಗೊಂಡ ಘಟನೆ ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ಮುಂಡಗೋಡ ತಾಲೂಕಿನ ಕೂಡ್ಲಿಯ ಪ್ರದೀಪ ಭೀಮಣ್ಣನಾಯಕ (22) ಮೃತ ವ್ಯಕ್ತಿ. ಇನ್ನೊಬ್ಬ ಸವಾರ ಮನ್ಮಥ ನಾಯಕ ಗಾಯಗೊಂಡವರು. ಇವರು ಬೈಕ್‌ ಮೇಲೆ ಬರುವಾಗ ಸ್ಕಿಡ್ ಆಗಿ ರಸ್ತೆ ಪಕ್ಕದ ಗಟಾರಕ್ಕೆ ಬಿದ್ದಿದ್ದು, ಪ್ರದೀಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಮನ್ಮಥನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.

Banner Ad
Banner Ad