Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಕೆಲವು ಕಡೆ ಮಧ್ಯಾಹ್ನ,ಸಂಜೆಯ ವೇಳೆ ಭರ್ಜರಿ ಮಳೆ,ಇನ್ನೂ ಕೆಲವು ಕಡೆ ಸಾಧಾರಣ ಮಳೆ ಗುಡುಗು ಮಿಂಚಿನೊಂದಿಗೆ ಆಗಿರುತ್ತದೆ. ಈಗಾಗಲೇ ಬಂಗಾಲಕೊಳ್ಳಿ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದೆ.

Banner Ad

ಕಾಡನ್ನು ಬೆಂಕಿಯಿಂದ ರಕ್ಷಿಸಲು ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳು,ಸಿಬ್ಬಂದಿಗಳು ಪರಿಸರ ಅಭಿವೃದ್ಧಿ ಸಮಿತಿ, ವಿಲೇಜ್ ಪಾರೆಸ್ಟ್ ಸಮಿತಿಗಳ ಮೂಲಕ ಊರಿನ ಗ್ರಾಮಸ್ಥರ ಸಹಕಾರದಲ್ಲಿ ಜಾಗೃತಿ ಮೂಡಿಸುವ ಅನೇಕ ಸಭೆಗಳನ್ನು ನಡೆಸಿದ್ದು,ಜೊತೆಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯುತ್ತಿದೆ.ಕಳೆದ ಒಂದು ತಿಂಗಳಿನಿಂದ ಅಕಾಲಿಕ ಮಳೆ ಆಗುತ್ತಿರುವುದು ಅರಣ್ಯ ಇಲಾಖೆಯವರಿಗೆ ಹಾಗೂ ಪರಿಸರ ಪ್ರಿಯರಿಗೆ ವರವಾಗಿ ಪರಿಣಮಿಸಿದೆ.ಇದೇ ರೀತಿಯಾಗಿ ಬೇಸಿಗೆ ಮುಗಿಯುವಷ್ಟರಲ್ಲಿ ಬಿಟ್ಟು-ಬಿಟ್ಟು ಮಳೆಯಾಗಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.

Banner Ad