Banner Ad

ಸುದ್ದಿ ಕನ್ನಡ ವಾರ್ತೆ

. ಉಡುಪಿ: ಕಂಬಳಕಟ್ಟೆಯಲ್ಲಿ ಬಾವಿಗೆ ಬಿದ್ದು 3 ದಿನಗಳ ಕಾಲ ನರಕಯಾತನೆ ಅನುಭವಿಸಿದ್ದ 62 ವರ್ಷದ ಶ್ರೀನಿವಾಸ ಆಚಾರ್ಯ ಎಂಬುವರನ್ನು ಅಗ್ನಿಶಾಮಕ ದಳದವರು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಗ್ಯಾಸ್ ಸಿಲಿಂಡ‌ರ್ ಡೆಲಿವರಿಗಾಗಿ ಬಂದ ಓಟಿಪಿ (OTP) ವಿಚಾರಣೆಯಿಂದಾಗಿ ಅವರು ಬಾವಿಯಲ್ಲಿರುವುದು ಬೆಳಕಿಗೆ ಬಂದಿದೆ.

Banner Ad

ಉಡುಪಿಯ ಕಂಬಳಕಟ್ಟೆ (ಕೊಡವೂರು)ಯ ನಿವಾಸಿಯಾದ ಶ್ರೀನಿವಾಸ ಆಚಾರ್ಯ (62 ವರ್ಷ)ಪಂಪ್ ಸೆಟ್ ದುರಸ್ತಿ ಮಾಡುವಾಗ 20 ಅಡಿ ಆಳದ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದರು.

3 ದಿನಗಳ ಕಾಲ ಆಹಾರವಿಲ್ಲದೆ, ಬಾವಿಯಲ್ಲಿದ್ದ ಹಗ್ಗ/ಪೈಪ್ ಹಿಡಿದು ಬದುಕುಳಿದಿದ್ದರು. ಗ್ಯಾಸ್ ಸಿಲಿಂಡ‌ರ್ ಡೆಲಿವರಿ ವಿಳಂಬವಾಗಿದ್ದರಿಂದ ಸಿಬ್ಬಂದಿ ಬಂದು ಹುಡುಕಾಡಿದಾಗ ಘಟನೆ ಬೆಳಕಿಗೆ ಬಂದು, ಅಗ್ನಿಶಾಮಕ ದಳವು ಅವರನ್ನು ಮೇಲಕ್ಕೆತ್ತಿದೆ.ವೃದ್ಧನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

Banner Ad