ಸುದ್ದಿ ಕನ್ನಡ ವಾರ್ತೆ

ಜೊಯಿಡಾ:ಹೆಸ್ಕಾಮ್ ಕಾರ್ಯಕ್ಷೇತ್ರದಲ್ಲಿ ರುವ ಮೂರು ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆ ಗಾಗಿ ಅನುಮತಿ ನೀಡುವಂತೆ, ಟಾಟಾ ಪವರ್ ಕಂಪನಿ ,ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿದೆ.ಸದ್ಯ ಇರುವ ಹೆಸ್ಕಾಮ್ ಕಂಪನಿಯ ಜಾಗದಲ್ಲಿ ಟಾಟಾ ಕಂಪನಿಗೆ ವಿತರಣಾ ಜವಾಬ್ದಾರಿಯನ್ನು ನೀಡುವುದನ್ನು ತೀವ್ರವಾಗಿ ವಿರೋಧಿಸುವದಾಗಿ ಜೋಯಡಾ ತಾಲ್ಲೂಕಿನ ಗಣ್ಯರು ಸಭೆ ಸೇರಿ ನಿರ್ಣಯ ಕೈಗೊಂಡಿದ್ದಾರೆ.

 

ಸರಕಾರಿ ಸ್ವಾಮ್ಯದಲ್ಲಿರುವ ಕಂಪನಿಗಳಿಂದ ಈ ಭಾಗದಲ್ಲಿ ಉತ್ತಮವಾದ ಸೇವೆ ಸಿಗುತ್ತಿದೆ. ಕನಿಷ್ಠ ದರಗಳು, ಸರಕಾರದ ಯೋಜನೆಗಳು, ಸಬಸಿಡಿ ವ್ಯವಸ್ಥೆ ಮುಂತಾದ ಸಾಮಾಜಿಕ ಹೊಣೆಗಾರಿಕೆ ಖಾಸಗಿ ಕಂಪನಿಗಳಿಗೆ ಇರುವದಿಲ್ಲ.ಅದೇ ರೀತಿ ಲಾಭದ ಆಸೆಗೆ ನಗರ ಪ್ರದೇಶ ಮತ್ತು ಹೆಚ್ಚಿನ ಆದಾಯದ ಚಟುವಟಿಕೆಗಳತ್ತ ಹೆಚ್ಚಿನ ಗಮನ ಕೊಟ್ಟು, ಗ್ರಾಮಿಣ ಪ್ರದೇಶ ಕ್ಕೆ ಖಾಸಗಿ ಕಂಪನಿಯವರು ನಿರ್ಲಕ್ಷಿಸುವ ಆತಂಕ ಇದೆ. ಅದಕ್ಕೆ ತೀವ್ರವಾಗಿ ವಿರೋಧಿಸುವ ಮತ್ತು ಆಕ್ಷೇಪಣೆ ಸಲ್ಲಿಸುವ ಬಗ್ಗೆ ಸಭೆಯಲ್ಲಿ ನಿರ್ಧಾರ ವ್ಯಕ್ತವಾಯಿತು. ವ್ಯಾಪಾರಸ್ಥರ ಸಂಘದ ನೇತ್ರತ್ವದಲ್ಲಿ ನಡೆದ ಈ ಸಭೆಯಲ್ಲಿ ಅನೇಕ ಸಂಘಟನೆ ಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಸುಧಾಕರ ದೇಸಾಯಿ ಪ್ರಾಸ್ತಾವಿಕ ಮಾತನ್ನಾಡಿದರು.

 

ವ್ಯಾಪಾರಸ್ಥರ ಸಂಘದ ಮಾಜಿ ಅಧ್ಯಕ್ಷ ರಫಿಕ್ ಖಾಜಿ ರವರು ಟಾಟಾ ಕಂಪನಿಯವರ ಯೋಜನೆ ಬಗ್ಗೆ ವಿವರವಾಗಿ ಮಾತನಾಡಿದರು. ಕರ್ನಾಟಕ ಕಿಸಾನ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ, ರವಿ ರೇಡಕರ್ ಮಾತನಾಡುತ್ತ ವಿದ್ಯುತ್ ನಿಯಂತ್ರಣ ಆಯೋಗದವರು ತರಾತುರಿಯಲ್ಲಿ ಯೋಜನೆಗೆ ಮುಂದಾಗದೆ ಪರಿಸರ ಹಾಗು ಸಾಮಜಿಕ- ಆರ್ಥಿಕ ಪರಿಣಾಮ ದ ಅಧ್ಯಯನ ನಡೆಸಿ, ಸಾರ್ವಜನಿಕ ಅಹವಾಲ ಪಡೆಯಬೇಕು. ಈ ಬಗ್ಗೆ ಮಾನ್ಯ ಶಾಸಕರ ಜತೆ ಚರ್ಚಿಸಿ, ಆಯೋಗದ ಮೇಲೆ ಒತ್ತಡ ಹೇರಲಾಗುವದೆಂದರು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ರಾದ ಕೆ ಎಲ್ ನಾಯ್ಕ್, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಂತೋಷ ಮಂತೆರೊ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ ದೇಸಾಯಿ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾದ ಅರುಣ ಕಾಮರೇಕರ್, ದಲಿತ ಸಂಘದ ಅಧ್ಯಕ್ಷ ಶ್ರೀಕಾಂತ ಹರಿಜನ, ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ರಾದ ರವಿ ಮಿರಾಶಿ ಹಾಗು ಕಿರಣ ನಾಯ್ಕ್, ಕಾಳಿ ಬ್ರಿಗೇಡ್ ನ ಪ್ರಭಾಕರ ನಾಯ್ಕ್ ಮತ್ತು ಸಮಿರ ಮುಜಾವರ, ಅಂಬಾರಿ ಸಂಸ್ಥೆಯ ಭವಾನಿ ಚವ್ಹಾಣ, ಮತ್ತು ಊರಿನ ಗಣ್ಯ ನಾಗರಿಕರು ಉಪಸ್ಥಿತರಿದ್ದರು. ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಅಜಿತ್ ಗಾವಡಾ ಸಭೆಯ ಸಂಯೋಜನೆ ಮಾಡಿದರು.