Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಕೇಂದ್ರದ ಶಿವಾಜಿ ಸರ್ಕಲ್ ನಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಮತ್ತು ಸಾರ್ವಜನಿಕರು ಸೇರಿ ಸಂವಿದಾನ ಶಿಲ್ಪಿ ಡಾ, ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿ ಯನ್ನು ಆಚರಿಸಿದರು.

Banner Ad

ಕಾರ್ಯಕ್ರಮದಅಧ್ಯಕ್ಷತೆ ಯನ್ನುತಾಲೂಕಾ ದಲಿತ ಸಂಘರ್ಷ ಸಮೀತಿ ಅಧ್ಯಕ್ಸರು ಶ್ರೀಕಾಂತ ಕಾಂಬಳೆ ವಹಿಸಿದ್ದರು .ಸ್ಥಳೀಯ ವಿನೋದ್ ಮಿರಾಶಿ ಉಪಸ್ಥಿತರಿದ್ದ ಕಾರ್ಯಕ್ರಮ ದಲ್ಲಿ ಶಿಕ್ಷಕರಾದ, ಭಾಸ್ಕರ್ ಗಾoವಕರ, ಮಹಾದೇವ ಹಳದನಕಾರ, ಆರ್ ಎನ್ ಚವಾಣ್ ಪ್ರಮುಖ ರಾದ ರಫೀಕ್ ಖಾಜಿ, ರವಿ ರೆಡ್ಕರ್,ಸಮೀರ್ ಮುಜಾವರ, ಉಪಸ್ಥಿತರಿದ್ದರು, ಕಾರ್ಯಕ್ರಮ ದಲ್ಲಿ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ಕ್ಕೆ ಗಣೇಶ ಪರವಾರ ಕಾರವಾರ ಸಹಕಾರ ನೀಡಿದ್ದರು ಸಂಚಾಲಕ ರಾಜೇಶ್ ಸ್ವಾಗತಿಸಿದರು, ಸಂಜು ಹರಿಜನ, ಓಂಕಾರ್, ಅಜಿತ್, ತಾತು, ಮಾದೇವ, ಪ್ರಕಾಶ್ ಇತರರು ಸಹಕಾರ ನೀಡಿದರು, ಇದಕ್ಕೂ ಮೊದಲುಅಂಬೇಡ್ಕರ್ ಭಾವ ಚಿತ್ರಕ್ಕೆ ಪೂಜೆ ಭವ್ಯ ಮೆರವಣಿಗೆ ನಡೆಯಿತು,

Banner Ad