Banner Ad

ಸುದ್ದಿ ಕನ್ನಡ ವಾರ್ತೆ

Panaji :ಗೋವಾದಲ್ಲಿ ಮೊದಲಬಾರಿಗೆ..
ಏಪ್ರಿಲ್ 6 ರಂದು ಬೆಳಿಗ್ಗೆ 9,30 ರಿಂದ 1 ಗಂಟೆ ವರೆಗೆ ಪರ್ವರಿಯ ಪುಂಡಲೀಕ ದೇವಸ್ಥಾನದಲ್ಲಿ ಸ್ಟಾರ್ ಸುವರ್ಣ  ವಾಹಿನಿಯವರ ತಂಡದ ಮುಖ್ಯಸ್ಥ ಶ್ರೀ ಗಿರೀಶ್ ಮತ್ತು ಜಗತ್ಪ್ರಸಿದ್ಧ ಶೋ ಆದ ಬೊಂಬಾಟ್ ಭೋಜನ ತಂಡದ ಮುಖ್ಯಸ್ಥರಾದ ಶ್ರೀ ಕಿರಣ್ ರವರ ನೇತೃತ್ವದಲ್ಲಿ,, ಜನಮೆಚ್ಚುಗೆ ಪಡೆದ
ಪ್ರಸಿದ್ಧ ಹಾಸ್ಯ ಚಲನ ಚಿತ್ರನಟರಾದ ಸಿಹಿಕಹಿ ಚಂದ್ರು ರವರು ಗೋವಾ ಕನ್ನಡ ಸಮಾಜ ಪಣಜಿ ಇವರ ಸಹಯೋಗದಲ್ಲಿ, ಬೊಂಬಾಟ್ ಭೋಜನ ಕಾರ್ಯಕ್ರಮವನ್ನು ತುಂಬಾ ಯಸಸ್ವಿಯಾಗಿ ನಡೆಸಿಕೊಟ್ಟರು,

Banner Ad

ಹಲವಾರು ಪದಾರ್ಥಗಳನ್ನು ಮಾಡಿ ಕನ್ನಡಿಗರಿಗೆ ಹಂಚಿ ರುಚಿ ನೀಡಿ ಸಂಭ್ರಮಿಸಿದರು, ಅದೇ ಸಂದರ್ಭದಲ್ಲಿ ಅವರನ್ನು ಗೋವಾ ಕನ್ನಡ ಸಮಾಜ ಪಣಜಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.. ಅಧ್ಯಕ್ಷರಾದ ಅರುಣ್ ಕುಮಾರ್,,ಸಹಾ ಕಾರ್ಯದರ್ಶಿ ಪ್ರಹ್ಲಾದ್ ಗುಡಿ, ಸದಸ್ಯರಾದ ಶ್ರೀ ಶ್ಯಾಮಸುದ್ದೀನ್ ಸೊಲ್ಲಾಪುರ್, ಚಿನ್ಮಯ್ ಉಪಸ್ಥಿತರಿದ್ದರು.

ನಂತರ ಗೋವಾದ ಪ್ರಸಿದ್ಧ ಸಸ್ಯಾಹಾರಿ ಹೊಟೆಲ್ ಗಳಾದ ಪರ್ವರಿಯ ನವ್ ರತ್ನ ಹಾಗೂ ಅರ್ಬನ್ ಅಣ್ಣ ಮತ್ತು ಪಣಜಿ ಮಾರ್ಕೆಟ್ ನಲ್ಲಿರುವ ,ನವರತ್ನ ಹಾಗೂ ಸಂಯೋಗ್  ಹೊಟೆಲ್ ಗಳಿಗೆ ಬೇಟಿ ನೀಡಿ ವಿಶೇಷ ಖಾದ್ಯ ಪದಾರ್ಥಗಳ ರುಚಿ ಸವಿದು ಬೊಂಬಾಟ್ ಭೋಜನ ಪ್ರಶಸ್ತಿಪತ್ರ ಮಾಲಿಕರಿಗೆ ನೀಡಿ, ಪ್ರಶಂಸೆಯ ಮಾತುಗಳನ್ನಾಡಿದರು.

Banner Ad