Banner Ad

ಸುದ್ದಿ ಕನ್ನಡ ವಾರ್ತೆ

ಜೊಯಿಡಾ:ತಾಲೂಕಿನಲ್ಲಿ ಇಂದು ಒಂದು ಗಂಟೆಗೂ ಹೆಚ್ಚು ಕಾಲ ಭಾರಿ ಮಳೆ ಬಿದ್ದಿದೆ. ಸಾಯಂಕಾಲ 5 ಗಂಟೆಯಿಂದ ಭಾರಿ ಗುಡುಗು ಸಿಡಿಲಿನೊಂದಿಗೆ ಪ್ರಾರಂಭವಾದ ಗಾಳಿ 5.30 ರಿಂದ ರಭಸದ ಮಳೆ ಬಿದ್ದು ಕಾದಿರುವ ಭೂಮಿಗೆ ತಂಪನ್ನು ನೀಡಿದೆ.

Banner Ad

ನಿನ್ನೆ ಕೂಡ ಕೆಲವು ಕಡೆ ಮಳೆಯಾಗಿತ್ತು. ಇಂದಿನ ಮಳೆಯಿಂದ ಒಣಗಿದ ಗಿಡ ಮರಗಳಿಗೆಲ್ಲ ಜೀವ ಬಂದಂತಾಗಿದೆ. ಬಿರುಸಾದ ಗುಡುಗು ಮಳೆಯಿಂದ ಯಾವುದೇ ಹಾನಿಯಾದ ಬಗ್ಗೆ ತಿಳಿದು ಬಂದಿಲ್ಲ. ವಿದ್ಯುತ್ ದೂರವಾಣಿಗಳು ನಿಂತು ಹೋಗಿವೆ.

Banner Ad