ಸುದ್ದಿ ಕನ್ನಡ
ಜೋಯಿಡಾ: ತಾಲೂಕಿನ ಕಾರ್ಟೋಳಿ ಗ್ರಾಮದಲ್ಲಿ ನ. 24ರಂದು ಶ್ರೀ ಸಿದ್ದನಾಥ ಹಾಗೂ ಶ್ರೀ ಮಹಾದೇವರ ಕೃಪಾಶೀರ್ವಾದದೊಂದಿಗೆ ತುಳಸಿ ವಿವಾಹ ಹಾಗೂ ಭವ್ಯ ಕಲೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಯುವ ನಾಟ್ಯ ಮಂಡಳಿ ಹಾಗೂ ಹಿರಿಯರ ಆಶ್ರಯದಲ್ಲಿ ವಿವಿಧ ಆರತಿ,ಭಜನೆಯ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿಶೇಷವಾಗಿ ‘ಟಿಳೋಂ ಕುಕ್ಮಾಚೋ ಆಧಾರ್ ಜನ್ಮಾಚೋ’ (ಪೈಸಾನ ಕೇಲೊ ಘಾತ್) ಎಂಬ ಹಾಸ್ಯಮಯ ಕೊಂಕಣಿ ನಾಟಕ ಪ್ರದರ್ಶನ ನೆರೆದಿದ್ದ ನೂರಾರು ಪ್ರೇಕ್ಷಕರ ಗಮನ ಸೆಳೆಯಿತು. ಗ್ರಾಮದ ಸ್ಥಳೀಯ ಹಿರಿಯ-ಯುವ ಕಲಾವಿದರು ತಮ್ಮ ಅಭಿನಯದ ಮೂಲಕ ರಂಜಿಸಿದರು.
ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರು, ಬಂಧುಗಳು ಮತ್ತು ಕಲಾಭಿಮಾನಿಗಳು ಭಾಗವಹಿಸಿ ಸಂಭ್ರಮಿಸಿದರು. ಈ ಮೂಲಕ ಕಾರ್ಟೋಳಿ ಗ್ರಾಮದಲ್ಲಿ ಸಂಪ್ರದಾಯ ಮತ್ತು ಕಲೆಯ ಸಮ್ಮಿಲನದ ಸುಂದರ ವಾತಾವರಣ ನಿರ್ಮಾಣವಾಯಿತು.