ಸುದ್ದಿ ಕನ್ನಡ ವಾರ್ತೆ
ದೆಹಲಿ: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026ರ ಚುನಾವಣಾ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಭರ್ಜರಿ ಗೆಲುವು ಸಾಧಿಸಿದೆ.
ಒಟ್ಟು 4 ಮುಖ್ಯ ಹುದ್ದೆಗಳ ಪೈಕಿ 3 ಸ್ಥಾನಗಳನ್ನು ABVP ತನ್ನದಾಗಿಸಿಕೊಂಡರೆ, ಉಪಾಧ್ಯಕ್ಷ ಸ್ಥಾನವನ್ನು ಪಕ್ಷೇತರ ಅಭ್ಯರ್ಥಿ ಗೆದ್ದುಕೊಂಡಿದ್ದಾರೆ.
ವಿಜೇತರ ವಿವರಗಳು ಈ ಕೆಳಗಿನಂತಿವೆ:
ಅಧ್ಯಕ್ಷರು: ಯಶ್ ದಾಬಸ್ (ABVP)
ಕಾರ್ಯದರ್ಶಿ: ರಿಯಾ ಛಾವ್ಡಿ (ABVP)
ಜಂಟಿ ಕಾರ್ಯದರ್ಶಿ: ಲಕ್ಷ್ಮಣ್ ರಾಜ್ ಸಿಂಗ್ (ABVP)
ಉಪಾಧ್ಯಕ್ಷರು: ದೀಪಾಂಶು ಶೋಕೀನ್ (ಪಕ್ಷೇತರ ಅಭ್ಯರ್ಥಿ)
ಸೆಪ್ಟೆಂಬರ್ 18 ರಂದು ನಡೆದ ಮತದಾನದ ನಂತರ, ಸೆಪ್ಟೆಂಬರ್ 19 ರಂದು 20 ಸುತ್ತುಗಳ ಮತ ಎಣಿಕೆ ನಡೆಸಿ ಈ ಫಲಿತಾಂಶವನ್ನು ಘೋಷಿಸಲಾಗಿದೆ.
