Banner Ad

ಸುದ್ದಿ ಕನ್ನಡ ವಾರ್ತೆ
ಜೋಯಿಡಾ,ದೇಶಕ್ಕೆ ಸ್ವಾತಂತ್ರ ದೊರೆತು ಇಂದಿಗೆ 80 ವರ್ಷ ಜೊತೆಗೆ ವಂದೇ ಮಾತರಂ ಕೂಡ 150 ವರ್ಷ ದ ಹಳೇ ಸವಿನೆನಪಿನೊಂದಿಗೆ ಇಂದು ಸ್ವಾತಂತ್ರ್ಯ ಉತ್ಸವದಲ್ಲಿ ಹಾಡುವಂತಾದ ಬಗ್ಗೆ ಜೋಯಿಡಾದಲ್ಲಿ ಜನತೆ ಸಂಭ್ರಮಿಸಿದರು. ತಾಲೂಕಾ ಕೇಂದ್ರದ ತಾಲೂಕಾ ಸೌಧ ದಲ್ಲಿ ತಹಸೀಲ್ದಾರ್ ಮಂಜುನಾಥ ಮುನ್ನೊಳ್ಳಿ ಮಹಾತ್ಮ ರ ಭಾವಚಿತ್ರ ಗಳಿಗೆ ಪೂಜೆ ನಡೆಸಿ ದ್ವಜಾರೋಹಣ ನಡೆಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾವು ಅನುಭವಿಸುತ್ತಿರುವ ಸ್ವತಂತ್ರ ಭಾರತದ ನೆಮ್ಮದಿಯ ಬದುಕು ಅಸಂಖ್ಯಾತ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ನಿರಂತರ ಶ್ರಮದ ಫಲವಾಗಿದೆ”ದೇಶ ಕಾಯುವ ವೀರ ಯೋಧರ ಸ್ಮರಣೆ ಮಾಡುತ್ತಾ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಸ್ಮರಿಸಿದರು,ದೇಶಕ್ಕಾಗಿ ಪ್ರಾಣ ಮುಡುಪಾಗಿಟ್ಟ ವೀರ ಯೋಧರ ಕೊಡುಗೆಯನ್ನು ಕೃತಜ್ಞತೆಯಿಂದ ನೆನೆದರು. ಗಡಿಯಲ್ಲಿ ಹಗಲಿರುಳು ಕಷ್ಟಪಡುವ ಯೋಧರಿಂದಾಗಿ ದೇಶದ ಕೋಟ್ಯಂತರ ನಾಗರಿಕರು ಸುರಕ್ಷಿತವಾಗಿದ್ದಾರೆ. ಪ್ರತಿಯೊಬ್ಬ ಯೋಧನ ದೇಶಪ್ರೇಮ ಮತ್ತು ಶೌರ್ಯ ಇಂದಿನ ಯುವ ಪೀಳಿಗೆಗೆ ಸದಾ ಪ್ರೇರಣೆಯಾಗಬೇಕು ,
ದೇಶದ ರಕ್ಷಣೆ ನಮ್ಮೆಲ್ಲರ ಹೊಣೆ
ಕೇವಲ ಗಡಿಯಲ್ಲಿ ನಿಲ್ಲುವ ಸೈನಿಕರು ಮಾತ್ರವಲ್ಲದೆ, ದೇಶದ ಒಳಗೆ ವಾಸಿಸುವ ಪ್ರತಿಯೊಬ್ಬ ನಾಗರಿಕನೂ ದೇಶದ ರಕ್ಷಣೆ ಮತ್ತು ಪ್ರಗತಿಗೆ ಬದ್ಧರಾಗಿರಬೇಕು. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಯ್ದುಕೊಳ್ಳುವುದು ಕೂಡ ದೇಶದ ರಕ್ಷಣೆಗೆ ನಾವು ನೀಡುವ ಕೊಡುಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.

Banner Ad

ಸಮಾರಂಭದಲ್ಲಿಇ ಓ ಭಾರತಿ ಎನ್, ಲೋಕೋಪಯೋಗಿ ಇಲಾಖೆಯ ಎ ಇ ಇ ಬಸವರಾಜ್ ಜಿ ಪಂ ಎ ಇ ಇ. ಶಿವಪ್ರಸಾದ್, ಕೆ ಪಿ ಸಿ ಸಿ ಸದಸ್ಯ ಸದಾನಂದ ದಬಗಾರ , ಶ್ಯಾಮ್ ಪೋಕಳೆ ಜೆಡಿಸ್ ಅಧ್ಯಕ್ಷ ಅಜಿತ್ ಥೋರತ್,ಪಿಎಸ್ಐ ಜಗದೀಶ ನಾಯ್ಕ್, ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಕಳೆ ನೀಡಿದರು. ಭವ್ಯ ಧ್ವಜಾರೋಹಣದ ನಂತರ ದೇಶಪ್ರೇಮ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹುಮಾನ ವಿತರಣೆಗಳು ನಡೆದವು, ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯಕ ಕಾರ್ಯಕ್ರಮ ನಡೆಸಿ ಕೊಟ್ಟರು, ಉಪತಶೀಲ್ದಾರ್ ಭಜಂತ್ರಿ ಮತ್ತು ಇಲಾಖೆಯ ಸಿಬ್ಬಂದಿ ಗಳು ಸಹಕರಿಸಿದರು.

Banner Ad