ಸುದ್ದಿ ಕನ್ನಡ ವಾರ್ತೆ

ಜೊಯಿಡಾ : ರೈತರಿಗೆ ಈ ಬಾರಿಯೂ ಬೆಳೆವಿಮೆ ಸಿಗುವುದು ಅನುಮಾನಎಂದುಹೇಳಲಾಗುತ್ತಿದೆ,ಜಿಲ್ಲೆಯಲ್ಲಿ ತಾಲೂಕಿನಲ್ಲಿ ಮಳೆ ಮಾಪನ ಕೇಂದ್ರಗಳು ಕೆಟ್ಟು ನಿಂತಿವೆ. ಇದನ್ನು ಸರಿಪಡಿಸುವವರೇ ಇಲ್ಲದ ಕಾರಣ ತಾಲೂಕಿನ ರೈತರಿಗೆ ಸಿಗಬೇಕಾದ ಬೆಳೆ ವಿಮೆ ಮತ್ತು ಬರಗಾಲ ಕ್ಕೆ ಸಂಚಕಾರ ಬಿದ್ದಿದೆ.

ಜಿಲ್ಲೆಯಲ್ಲಿ 26-27 ನೇ ಸಾಲಿಗೆ 46 ಸಾವಿರ ರೈತರು ಬೆಳೆ ವಿಮೆ ತುಂಬಿದ್ದಾರೆ. ಅಡಿಕೆ , ಕೊಳೆ , ಗೋವಿನ ಜೋಳದ ತೆನೆ ಹಾಳು, ಎಲೆ ಚುಕ್ಕಿರೋಗ , ಕೆಲವು ಕಡೆ ಮಳೆ ಇಲ್ಲದೆ ನಾಟಿ ಕಾರ್ಯ ಆಗದಿರುವುದು ಹೀಗೆ ವಿವಿಧ ಕಾರಣಗಳಿಂದ ರೈತರಿಗೆಹಾಳಾದ ಬೆಳೆಗೆ ವಿಮೆ ಸಿಗಬೇಕಿತ್ತು, ಆದರೆ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಮಳೆ ಮಾಪನ ಕೇಂದ್ರಗಳು ಕೆಟ್ಟು ನಿಂತಿವೆ. ಜವಾಬ್ದಾರಿ ಇರುವ ಯಾರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಹೀಗಿದ್ದರೂ ಕೆಟ್ಟ ಮಳೆ ಮಾಪನ ಕೇಂದ್ರದ ಆಧಾರದ ಮೇಲೆ ಜಿಲ್ಲೆಯ ಮುಂಡಗೋಡ , ಯಲ್ಲಾಪುರ ತಾಲೂಕನ್ನು ಬರಗಾಲ ಪೀಡಿತ ಎಂದು ಸರಕಾರ ಘೋಷಿಸಿದೆ.

 

ಜೊಯಿಡಾ ತಾಲೂಕಿಗೆ ಕಳೆದ ಈ ಅವಧಿಯಲ್ಲಿ ಸಾಕಷ್ಟು ಮಳೆ ಆಗಿ ಸೂಪಾ ಜಲಾಶಯ ತುಂಬಿತ್ತು , ಕಳೆದ ಈ ಅವಧಿ ಯಲ್ಲಿ ಶಾಸಕರು ಭಾಗಿನ ಅರ್ಪಿಸಿ ಆಗಿತ್ತು. ಆದರೆ ಈ ಅವಧಿ ಯಲ್ಲಿ ಸೂಪಾ ಜಲಾಶಯಕ್ಕೆ ಇನ್ನೂ 15 ಮೀಟರ್ ನೀರಿನ ಕೊರತೆ ಇದೆ.ಹಳಿಯಾಳದಲ್ಲಿ ಶಾಸಕರು ಕಳೆದ ವಾರ ಮಾಡಿದ ಪ್ರೆಸ್ ಮೀಟ್ ನಲ್ಲಿ ಜೊಯಿಡಾ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದು ಹೇಳಿದ್ದಾರೆ, ಎಂದು ವರದಿ ಯಾಗಿದೆ ಆದರೆ ಅದು ಹೇಗೆ ಎಂದು ತಿಳಿಯುತ್ತಿಲ್ಲ. ಮಳೆ ಮಾಪನ ಕೇಂದ್ರ ಸರಿ ಇಲ್ಲ. ಜಲಾಶಯ ತುಂಬಿಲ್ಲ ಆದರೂ ಮಳೆ ಹೇಗೆ ಹೆಚ್ಚಾಯಿತು ಎನ್ನುವುದು ಜನರ ಪ್ರಶ್ನೆಯಾಗಿದೆ.

 

ಕಳೆದ ವರ್ಷ ಕಾಟಾಚಾರಕ್ಕೆ ಬೆಳೆ ವಿಮೆ ರೈತರಿಗೆ ಕೊಡಲಾಗಿತ್ತು ಕೆಲವರಿಗೆಇನ್ನೂಬರಬೇಕಾಗಿದೆ.
ಸರಕಾರ ಮಳೆ ಮಾಪನ ಕೇಂದ್ರ ಗಳನ್ನು ಸರಿಪಡಿಸಿ ರೈತರಿಗೆ ಆಗಿರುವ ಅನ್ಯಾಯ ವನ್ನು ಸರಿಪಡಿಸಬೇಕಾಗಿದೆ.
ಯಲ್ಲಾಪುರ ಮುಂಡಗೋಡ ಭಾಗದಲ್ಲಿ ವಾಡಿಕೆಗಿಂತ 60% ಮಳೆ ಕಡಿಮೆ ಎನ್ನಲಾಗಿದೆ. ಹಾಗಾದರೆ ಜೊಯಿಡಾ ಮಳೆ ಅಂದಾಜು ಯಾರು ನೀಡಿದರು. ಮಳೆ ಜಾಸ್ತಿಯಾದರೆ ಜಲಾಶಯ ಯಾಕೆ ಇನ್ನೂ ತುಂಬಿಲ್ಲ.ಮಳೆ ಇಲ್ಲದೇ ಇನ್ನೂ ನಾಟಿ ಬಾಕಿ ಇದೆ, ಇದು ಮಳೆ ಕೊರತೆಯಿಂದ, ಆಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಇನ್ನೂ 30% ಮಳೆ ಕಡಿಮೆ ಇದೆ, ಎನ್ನಲಾಗಿದೆ, ಏನೇ ಇದ್ದರೂ ಸರಕಾರ ಕೂಡಲೇ ಮಳೆ ಮಾಪನ ಕೇಂದ್ರದ ಮೇಲೆ ಹಿಡಿತ ಇಟ್ಟು ಸರಿ ಪಡಿಸಿ ಕೊಳ್ಳಬೇಕು, ಇಲ್ಲ ವಾದಲ್ಲಿ 46 ಸಾವಿರ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಕೊಡಿಸಬೇಕು, ಎನ್ನುವುದು ರೈತರ ಆಗ್ರಹ ವಾಗಿದೆ.