ಸುದ್ದಿ ಕನ್ನಡ ವಾರ್ತೆ
ಹೊನ್ನಾವರ : ರೈನ್ ಮೈನ್ ಕನ್ನಡ ಸಂಘ ಇ ವಿ ಫ್ರಾಂಕ್ಷರ್ಟ್ ಜರ್ಮನಿ ಮತ್ತು ಆರಂಭ ಟ್ರಸ್ಟ್ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿರುವ ಜಾನಪದ ವೈಭವ ಕಾರ್ಯಕ್ರಮ ಇಂದು ಮೇ. 23 ರಂದು ಜರ್ಮನಿಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ನಿರೂಪಕನಾಗಿ ಹೊನ್ನಾವರದ ಖ್ಯಾತ ನಿರೂಪಕ ಜಗದೀಶ್ ಗೌಡ, ಗಾಯಕ ಜೂನಿಯರ್ ರಘು ದಿಕ್ಸಿತ್ ಖ್ಯಾತಿಯ ರಮೇಶ್ ಮೇಸ್ತರವರು ಭಾಗವಹಿಸಲಿದ್ದಾರೆ. ಜಿ ಕನ್ನಡ ಹಾಗೂ ಅನೇಕ ಟಿವಿ ವಾಹಿನಿಯ ಕಲಾವಿದರು ಭಾಗವಹಿಸುವ ಅತ್ಯುತ್ತಮ ಕಾರ್ಯಕ್ರಮ ಇದಾಗಲಿದೆ.

ಕಳೆದ 18 ವರ್ಷಗಳಿಂದ ಕಲಾಸೇವೆಯಲ್ಲಿ ಇರುವ ಓಎಚ್‌ಬಿ ನೃತ್ಯ ತಂಡದ ಸದಸ್ಯರಾಗಿರುವ ಇವರು ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮ, ಹರ್ಯಾಣ, ತೆಲಂಗಾಣ ಸಂಘದ ಕಾರ್ಯಕ್ರಮದಲ್ಲಿ ಈಗಾಗಲೇ ಭಾಗವಹಿಸಿದ್ದಾರೆ.