ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಕಣ್ಣಿಗೇರಿ ಬಳಿ ಹಳಿಯಾಳ ರಸ್ತೆಯಲ್ಲಿ ಕಾಡುಕೋಣಗಳ ಗುಂಪೊಂದು ದಾಟುತ್ತಿರುವುದು ಕಂಡು ಬಂದಿದ್ದು, ಪ್ರಯಾಣಿಕರನ್ನು ಭಯಗೊಳಿಸಿದೆ.
ಕಳೆದ 2-3 ತಿಂಗಳುಗಳಿಂದ ಕಣ್ಣಿಗೇರಿ ಭಾಗದಲ್ಲಿ ಕಾಡಾನೆಯೊಂದು ಓಡಾಡುತ್ತಿತ್ತು,ಸುತ್ತಮುತ್ತಲಿನ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿದ್ದಲ್ಲದೇ, ಹಳಿಯಾಳ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ಅಡ್ಡಗಟ್ಟಿ, ಸವಾರರಿಗೆ ತೊಂದರೆ ನೀಡಿತ್ತು.
ಇದೀಗ ಕಾಡುಕೋಣಗಳ ಗುಂಪು ಈ ಭಾಗದಲ್ಲಿ ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.
