Banner Ad

ಸುದ್ದಿ ಕನ್ನಡ ವಾರ್ತೆ

​ಬಿಜೆಪಿ ರಾಜ್ಯ ಮಾಜಿ ಕಾರ್ಯದರ್ಶಿಗಳು ಹಾಗೂ ಎಸ್‌ಐಆರ್ ರಾಜ್ಯ ಸಂಚಾಲಕರಾದ ಶ್ರೀ ಜಗದೀಶ್ ಹಿರೇಮನಿ ಅವರ ಅಕಾಲಿಕ ನಿಧನದ ವಾರ್ತೆ ಕೇಳಿ ಮನಸ್ಸಿಗೆ ತೀವ್ರ ಆಘಾತವಾಗಿದೆ.

Banner Ad

​ವಿದ್ಯಾರ್ಥಿ ದೆಸೆಯಿಂದಲೇ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ಭಾರತೀಯ ಜನತಾ ಪಕ್ಷದ ಒಬ್ಬ ಶಿಸ್ತಿನ ಸಿಪಾಯಿಯಾಗಿ ಗುರುತಿಸಿಕೊಂಡಿದ್ದರು. ರಾಜ್ಯ ಕಾರ್ಯದರ್ಶಿಗಳಾಗಿ ಹಾಗೂ ಪಕ್ಷ ನೀಡಿದ ವಿವಿಧ ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ ಅವರ ಕಾರ್ಯದಕ್ಷತೆ ಮತ್ತು ಸಂಘಟನಾ ಚಾತುರ್ಯ ಇಂದಿನ ಯುವಜನತೆಗೆ ಸದಾ ಮಾದರಿ.

​ಪಕ್ಷದ ಸಂಘಟನೆಗಾಗಿ ಅಹರ್ನಿಶಿ ಶ್ರಮಿಸಿದ ಅವರ ನಿಧನವು ಸಾರ್ವಜನಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

​”ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ. ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಹಾಗೂ ಹಿತೈಷಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

​ಓಂ ಶಾಂತಿ.

ವಿಶ್ವೇಶ್ವರ ಹೆಗಡೆ ಕಾಗೇರಿ
ಸಂಸದರು ಉತ್ತರಕನ್ನಡ.

Banner Ad