Banner Ad

ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನ ಅವುರ್ಲಿಯಲ್ಲಿ ಚಿರತೆ ದಾಳಿಗೊಳಗಾದ ಮಹಿಳೆಯ ಮನೆಯ ಅಕ್ಕ ಪಕ್ಕದಲ್ಲಿ ಅರಣ್ಯ ಇಲಾಖೆಯಿಂದ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ತಿಳಿದು ಬಂದಿದೆ.

ಕಾಳಿ ಹುಲಿ ಯೋಜನೆಯ ಪಣಸೋಲಿ ವನ್ಯ ಜೀವಿ ವಲಯ ವ್ಯಾಪ್ತಿಯ ಅವುರ್ಲಿಯಲ್ಲಿ ಮಹಿಳೆಯ ಮೇಲೆ ಚಿರತೆ ದಾಳಿ ನಡೆದಿದ್ದು ಅಸ್ವಸ್ಥ ಮಹಿಳೆಗೆ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಎಸ್‌ಡಿಎಂ ದವಾಖಾನೆಗೆ ದಾಖಲಿಸಲಾಗಿದೆ. ಅರಣ್ಯ ಇಲಾಖೆಯೆ ಮಹಿಳೆಯ ಚಿಕಿತ್ಸೆ ವ್ಯವಸ್ಥೆ ಮಾಡಲಿದೆ. ಚಿರತೆ ಬಗ್ಗೆ ನಿಗಾ ಇಡಲಾಗುತ್ತದೆ. ಸ್ಥಳೀಯರು ಹೆದರುವ ಅಗತ್ಯವಿಲ್ಲ ಎಂದು ವಲಯ ಅರಣ್ಯಾಧಿಕಾರಿ ಪಣಸೋಲಿಯ ರವಿಕಿರಣ ಸಂಪಗಾವಿ ತಿಳಿಸಿದ್ದಾರೆ.

Banner Ad
Banner Ad