ಸುದ್ದಿ ಕನ್ನಡ ವಾರ್ತೆ

ಗೋಕರ್ಣ’: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ವೈದಿಕರ ಮನೆಗೆ ಬಂದಿದ್ದ ತೆಲಂಗಾಣದ ಭಕ್ತರಿಗೆ ನಿಮಗೆ ಗಂಡಾಂತರವಿದೆ ಎಂದು ಹೇಳಿ ನಾಗಸಾಧುಗಳು ಅವರ ಬಳಿ ಇದ್ದ ಚಿನ್ನಾಭರಣ ದೋಚಿದ ಆತಂಕಕಾರಿ ಘಟನೆ ನಡೆದಿದೆ.

 

            ಆದರೆ ಸಮಾಧಾನಕರ ವಿಷಯವೆಂದರೆ  ಪೊಲೀಸರು ಕೂಡಲೇ ತನಿಖೆ ನಡೆಸಿ ಆ ನಾಗ ಸಾಧುಗಳನ್ನು ಪತ್ತೆ ಹಚ್ಚಿ ಸುಮಾರು 8 ಲಕ್ಷ ರೂ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡು ತೆಲಂಗಾಣದ  ಈ ನೊಂದ ದಂಪತಿಗಳಿಗೆ ಮರಳಿಸಿದ್ದಾರೆ.
ನಿಮ್ಮ ಸಮಸ್ಯೆ ಬಗೆಹರಿಸುವೆ ಎಂದು ಹೇಳಿ ನಂಬಿಸಿ ತೆಲಂಗಾಣ ದಿಂದ ಬಂದಿದ್ದ ಭಕ್ತರ ಬಳಿ ಇದ್ದ ಚಿನ್ನವನ್ನು ಈ ನಾಗ ಸಾಧುಗಳು ದೋಚಿದ್ದರು. ನಿಮಗೆ ಗಂಡಾಂತರವಿದೆ ಎಂದು ಅವರಿಗೆ ಭೀತಿ ಹುಟ್ಟಿಸಿದ್ದರು.  ಈ ಕೃತ್ಯ ವ್ಯಸಗಿದ್ದ ಐದು ಜನ ನಾಗಸಾಧುಗಳ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದಾರೆ.
ಪಿ ಐ ಶ್ರೀಧರ್ ಎಸ್ ಆರ್ ಹಾಗೂ ಪಿಎಸ್ಐ  ಅನಿಲ್, ನೇತೃತ್ವದ ಪೊಲೀಸರ ತಂಡ  ತುರಿತ ಕಾರ್ಯಾಚರಣೆ ನಡೆಸಿ ಉಡುಪಿಗೆ ಹೋಗಿ ಈ ನಾಗ ಸಾಧುಗಳನ್ನು ಹಿಡಿದು ತಂದಿದ್ದಾರೆ. ಭಕ್ತಾದಿಗಳಿಂದ ಕದ್ದಿದ್ದ ಚಿನ್ನವನ್ನು ಅದೇ ನಾಗ ಸಾಧುಗಳ ಕೈಯಿಂದಲೇ ಅವರಿಗೆ ಪೊಲೀಸರು  ಮರಳಿಸಿದ್ದಾರೆ.