ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಮಪಂಚಾಯತ ವ್ಯಾಪ್ತಿಯ ಡಬ್ಗುಳಿ ಗ್ರಾಮದ ಗಣಪತಿ ವಿ ಭಟ್ಟ ಇವರ ಅಧಿಕೃತ ಸೊಪ್ಪಿನ ಬೆಟ್ಟದಲ್ಲಿ ಅರಣ್ಯ ಇಲಾಖೆಯವರು ಬಲವಂತದಿಂದ ಮುಳ್ಳು ಬಿದಿರು ಸಸಿ ನೆಟ್ಟು ಸೊಪ್ಪಿನ ಬೆಟ್ಟ ವಶಪಡಿಸಿಕೊಳ್ಳಲು ಮುಂದಾಗಿದ್ದರು.

ಸ್ಥಳಕ್ಕೆ ಬೆಟ್ಟ ಹೋರಾಟ ಸಮಿತಿ ನಿಯೋಗ ಭೇಟಿ ನೀಡಿ ಚರ್ಚಿಸಿದಾಗ ಈ ಕ್ರಮ ಇಲ್ಲಿಗೇ ಕೈಬಿಡುವ ಭರವಸೆ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಈ ರೀತಿ ತಪ್ಪು ಆಗದಂತೆ ನೋಡಿಕೊಳ್ಳಲು ಸೂಚಿಸಿ,ಈ ಪ್ರವೃತ್ತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಕಠಿಣ ಹೋರಾಟ ನಡೆಸುವ ಎಚ್ಚರಿಕೆ ನೀಡಲಾಯಿತು.

ನಿಯೋಗದಲ್ಲಿ  ಬಿಜೆಪಿ ರಾಜ್ಯ ವಕ್ತಾರ  ಹರಿಪ್ರಕಾಶ್ ಕೋಣೆಮನೆ,ಬೆಟ್ಟ ಹೋರಾಟ ಸಮಿತಿ ಯಲ್ಲಾಪುರದ ಸಂಚಾಲಕ ಕೆಟಿ ಹೆಗಡೆ,ಸದಸ್ಯರಾದ ವೆಂಕಟರಮಣ ಬೆಳ್ಳಿ, ವಿಶ್ವನಾಥ್ ಹಳೆಮನೆ ಮತ್ತು ಸ್ಥಳೀಯ ರೈತರು ಇದ್ದರು.

ಇಲ್ಲಿ ಮತ್ತೊಂದು ಚಿತ್ರ ಇದೆ ನೋಡಿ,
ಅದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೇಲಿನ ಫಲಕದ ಪ್ರಕಾರ 20 ಹೆಕ್ಟರ್ ಜಾಗದಲ್ಲಿ 8 ಸಾವಿರ ಸಸಿಗಳನ್ನು ನೆಡಲಾಗಿದೆ.
ವಾಸ್ತವದಲ್ಲಿ ಇಲ್ಲೆಲ್ಲೂ 20 ಹೆಕ್ಟರ ಜಾಗ ಇಲ್ಲ,8 ಸಾವಿರ ಹೋಗಲಿ ಎರಡು ಸಾವಿರ ಗಿಡಗಳನ್ನೂ ನೆಡಲಾಗಿಲ್ಲ.ನೆಟ್ಟಿದ್ದೂ ಕೂಡ ಅಧಿಕೃತ ಸಾಪಿನ ಬೆಟ್ಟದಲ್ಲಿ.
ಇನ್ನು ಅಲ್ಲಲ್ಲಿ ಬೆಳೆಸಿದ ಸಸಿಗಳನ್ನು ನೆಡದೆ ರಾಶಿ ರಾಶಿ ಸಸಿಗಳನ್ನು ಬೇಕಬಿಟ್ಟಿ ಬಿಸಾಡಿ ದ್ದೂ ಕೂಡ ಕಂಡುಬಂತು.

ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸುತ್ತಾರೆಯೇ?
ಕಾದು ನೋಡೋಣ.
ಇದು ಒಂದರ್ಥದಲ್ಲಿ ಅರಣ್ಯ ರೋದನ!!