ಸುದ್ದಿ ಕನ್ನಡ ವಾರ್ತೆ
ಜೊಯಿಡಾ ;ಗುಂದ ವನ್ಯಜೀವಿ ವಿಭಾಗದ ಉಳವಿ ಯಲ್ಲಿ ಅರಣ್ಯ ಇಲಾಖೆಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ನಡೆದವು . ಅರಣ್ಯ ಇಲಾಖೆ ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸಿ ಇ ಓ, ರಾಧಾ ದೇವಿ, ವಿ, ಯವರಿಂದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು. ಅರಣ್ಯ ಇಲಾಖೆಯ ನೂತನ ವಸತಿ ಗೃಹಗಳ ಉದ್ಘಾಟನೆ ಮತ್ತು ವನ ಮಹೋತ್ಸವ ಕಾರ್ಯಕ್ರಮಗಳು ನಡೆದವು.
ವನ ಮಹೋತ್ಸವದಲ್ಲಿ ಪಿ ಸಿ ಸಿ ಎಫ್ ರಾಧಾ ದೇವಿ ಅವರು ತಮ್ಮ ತಾಯಿ ಚಂದ್ರಕಾಂತಮ್ಮ ಅವರ ಸವಿ ನೆನಪಿಗಾಗಿ ಒಂದು ಸಸಿ ನೆಡುವ ಮೂಲಕ ಮಾಕೆ ನಾಮ್ ಏಕ ಪೇಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪರಿಸರ ಚೆನ್ನಾಗಿರಬೇಕು ಹಸಿರು ಹೊದಿಕೆ ಯನ್ನು ಹೆಚ್ಚಿಸುವ ದೃಷ್ಟಿಯಿಂದ ಜನರು ತಮ್ಮ ತಮ್ಮ ತಾಯಂದಿರ ಹೆಸರಿನಲ್ಲಿ ಒಂದು ಗಿಡ ನೆಟ್ಟು ಸಂರಕ್ಷಿಸಿದರೆ, ಮುಂದಿನ ಪೀಳಿಗೆಗೆ ಅದು ಆಸರೆಯಾಗುತ್ತದೆ. ಸ್ಥಳೀಯರ ಸಹಭಾಗಿತ್ವದಲ್ಲಿ ಕೆಲಸ ಮಾಡುವ ಮೂಲಕ ಅರಣ್ಯ ಇಲಾಖೆ ಮಾದರಿ ಯಾಗಬೇಕು. ಜೊತೆಗೆಸ್ವಚ್ಛತೆಗೆ ಮಹತ್ವ ಕೊಡಬೇಕುಎಂದರು
ಇದಕ್ಕೂ ಮೊದಲು ಅವರು ಉಳವಿ ಯ ಪರಿಸರ ಸಂರಕ್ಷಣೆಗೆ ಎಂದು ನಿರ್ಮಿಸಲಾದ ಸಿಬ್ಬಂದಿಗಳ ಸುಸಜ್ಜಿತ ವಸತಿ ಗೃಹಗಳನ್ನು ಉದ್ಘಾಟಿಸಿದರು. ಸುಂದರ ಪರಿಸರ ಉಳಿಯಲು ನಾವು ನಿರಂತರ ಶ್ರಮ ವಹಿಸಬೇಕು. ಕಾಡಿನ ರಕ್ಷಕರಿಗೆ ರಕ್ಷಣೆಗೆಂದು ಈ ವಸತಿಗೃಹ ನಿರ್ಮಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಂದಿಗದ್ದಾ ಗ್ರಾಪಂ ಮಾಜಿ ಅಧ್ಯಕ್ಷ ಅರುಣ್ ದೇಸಾಯಿ ಮಾತನಾಡಿ ಕಾಡಿನ ರಕ್ಷಣೆಯ ಜೊತೆಗೆ ಸ್ಥಳೀಯರ ಅಗತ್ಯತೆ ಗಳಿಗೆ ಅರಣ್ಯ ಇಲಾಖೆ ಸಹಕಾರ ನೀಡಬೇಕು ಕುಡಿಯುವ ನೀರು ,ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಸಹಕಾರ ಬಯಸಿದರು.
ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ನೀಲೇಶ್ ಶಿಂಧೆ ಹಳಿಯಾಳ ಡಿ ಎಫ್ ಓ, ಪ್ರಶಾಂತ ಕುಮಾರ, ಎಸಿಫ್ ಎಂ ಎಸ್ ಕಳ್ಳಿಮಠ್,ವಲಯ ಅರಣ್ಯಾಧಿಕಾರಿ ನೀಲಕಂಠ ದೇಸಾಯಿ , ಉಳವಿಯಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಂಜುನಾಥ್ ಮೊಕಾಶಿ,ಅರಣ್ಯ ಇಲಾಖೆಯ ಸಿಬ್ಬಂದಿಗಳು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
