Banner Ad

ಸುದ್ದಿ ಕನ್ನಡ ವಾರ್ತೆ

ಹೊನ್ನಾವರ:ತಾಲೂಕಿನ ವಂದೂರು ಸಮೀಪದ ಜಡಿಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಗೋವನ್ನು ಕದ್ದು ಕೊಂದು, ಮಾಂಸವನ್ನ ಗೋ ಕಳ್ಳರು ತೆಗೆದುಕೊಂಡುಹೋದ ಘಟನೆ ನಡೆದಿದೆ.

Banner Ad

ವಂದೂರಿನ ಜಡಿಗದ್ದೆಯ ಗಣಪತಿ ಮಹಾಬಲೇಶ್ವರ ಭಟ್ ಎನ್ನುವವರಿಗೆ ಸೇರಿದ್ದ ದನ ಇದಾಗಿದ್ದು ಅವರ ಗೇರ್ ಪ್ಲಾಟ್ ನಲ್ಲಿ ದನವನ್ನ ಕಡಿದು ಮಾಂಸ ಕದ್ದೊಯ್ಯಲಾಗಿದೆ. ಸ್ಥಳಕ್ಕೆ ಹೊನ್ನಾವರ ಸಿಪಿಐ ಸಿದ್ದರಾಮೇಶ್ವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಘಟನೆ ಸಂಬಂಧ ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Banner Ad