ಸುದ್ದಿ ಕನ್ನಡ ವಾರ್ತೆ

ವಿ ಪ ಸದಸ್ಯ ಶಾಂತಾರಾಮ ಸಿದ್ದಿ ಅವರು ಇಂದು ನಿವೃತ್ತಿ ಯಾಗುತ್ತಿದ್ದು ಆ ಬಗ್ಗೆ ಹೇಳಿಕೆ ನೀಡಿರುತ್ತಾರೆ. ಮಾನ್ಯರೆ ನಮಸ್ತೇ.
ವಿಧಾನ ಪರಿಷತ್ತಿನ ನನ್ನ ಅವಧಿಯು ಇಂದಿಗೆ (21 07 2026) ಮುಕ್ತಾಯವಾಗಲಿದ್ದು ನಾನು ನಿವೃತ್ತಿ ಹೊಂದುತ್ತಿದ್ದೇನೆ.
2020 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮತ್ತು ವನವಾಸಿ ಕಲ್ಯಾಣ ಆಶ್ರಮದ ಹಿರಿಯರ ಸೂಚನೆಯಂತೆ ನನಗೆ ವಿಧಾನ ಪರಿಷತ್ತಿನ ಶಾಸಕನಾಗಿ ನಾಮ ನಿರ್ದೇಶನ ಮಾಡಲು ಭಾರತೀಯ ಜನತಾ ಪಾರ್ಟಿಯ ಸರಕಾರ ಮಾನ್ಯ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿತ್ತು. ಅಂದಿನಿಂದ ಇಂದಿನವರೆಗೆ ಆರು ವರ್ಷಗಳ ಕಾಲ ನನಗೆ ಸಹಕಾರ ನೀಡಿದ ಸಂಘದ ಎಲ್ಲಾ ಸ್ವಯಂಸೇವಕರಿಗೆ, ವನವಾಸಿ ಕಲ್ಯಾಣ ಆಶ್ರಮದ ಕಾರ್ಯಕರ್ತರಿಗೆ ಮತ್ತು ಭಾರತೀಯ ಜನತಾ ಪಾರ್ಟಿಯ ಎಲ್ಲಾ ಕಾರ್ಯಕರ್ತರಿಗೆ ಅನೇಕಾನೇಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಈ ಅವಧಿಯಲ್ಲಿ ತಮ್ಮ ನಿರೀಕ್ಷೆಯ ಅರ್ಧದಷ್ಟು ಕೆಲಸಗಳನ್ನು ಮಾಡಲು ನನ್ನಿಂದ ಆಗದೆ ಇರಬಹುದು. ರಾಜಕೀಯ ಕ್ಷೇತ್ರದ ಯಾವುದೇ ಹಿನ್ನೆಲೆ ಅಥವಾ ಅನುಭವ ಇಲ್ಲದ ಕಾರಣ ಅದಕ್ಕೆ ಹೊಂದಿಕೊಳ್ಳಲು ಒಂದಷ್ಟು ಸಮಯ ಕಳೆದು ಹೋಯಿತು. ಉಳಿದಂತೆ ದೇಶ ಕಾಲ ಪರಿಸ್ಥಿತಿಗೆ ಅನುಗುಣವಾಗಿ ನನ್ನ ಮನಸ್ಸಿಗೆ ಸಮಾಧಾನವಾಗುವಷ್ಟು ಕೆಲಸ ಮಾಡಿದ್ದೇನೆ. ರಾಜಕೀಯ ಕ್ಷೇತ್ರದ ಯಾವುದೇ ವ್ಯಕ್ತಿ ಎಲ್ಲಾ ಕಾರ್ಯಕರ್ತರಿಗೆ ಸಮನಾಗಿ ನೋಡಬಹುದು ಆದರೆ ಸಮಾಧಾನ ಪಡಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ನನ್ನಿಂದ ಕೂಡ ಅನೇಕರಿಗೆ ಒಂದಷ್ಟು ಬೇಸರವಾಗಿದೆ ಎಂಬುದು ನನಗೂ ಗೊತ್ತು. ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಂಡು ಹೋಗುವ ಪ್ರಯತ್ನ ಮಾಡುತ್ತೇನೆ. ಮುಂದೆ ಕೂಡ ತಮ್ಮ ಸಹಕಾರ ನಿರಂತರ ಇರಲಿ. ಮತ್ತೊಮ್ಮೆ ಧನ್ಯವಾದಗಳೊಂದಿಗೆ ಎಂದು
ಶಾಂತರಾಮ ಸಿದ್ದಿ ಅವರು ಹೇಳಿಕೆ ನೀಡಿದ್ದಾರೆ.