ಸುದ್ದಿ ಕನ್ನಡ ವಾರ್ತೆ

ಕಾಳಿ ನದಿ ತೀರದ ರಿಸಾರ್ಟ್ ಮಾಲಿಕರ ಸಂಘ ಇಂದು ಜಿಲ್ಲಾಧಿಕಾರಿಯವರನ್ನು ಭೆಟ್ಟಿಯಾಗಿ ಜಲಸಾಹಸ ಕ್ರೀಡಾ ಚಟುವಟಿಕೆಗಳಿಗೆ ಮಳೆಗಾಲದ ನಿಷೇಧ ಹಿಂಪಡೆದು ಹಿಂದಿನಂತೆ ಪ್ರವಾಸಿಗರಿಗೆ ಮುಕ್ತ ವಾಗಿರಿಸಲು ಅವಕಾಶ ನೀಡುವಂತೆ ವಿನಂತಿಸಿದರು.

ಕಾಳಿ ನದಿಯ ಡ್ಯಾಮ್ ಕೆಳಗಿನ ಪ್ರವಾಹ ಎಂದಿಗೂ ಉಕ್ಕಿ ಹರಿಯುವುದಿಲ್ಲ . ಎಲ್ಲಾ ಉಪನದಿಗಳು ಡ್ಯಾಮ್ ಮೇಲಿನ ಹಿನ್ನಿರಿಗೆ ಸೇರುವದರಿಂದ ಕೆಳಗಿನ ಪ್ರದೇಶದಲ್ಲಿ ಯಾವಾಗಲು ಅತಿರಿಕ್ತ ಪ್ರವಾಹ ಬರುವದಿಲ್ಲ. ಜಲಸಾಹಸ ಕ್ರೀಡೆಗಳು ಪ್ರವಾಸೋದ್ಯಮ ದ ಜೀವ . ಅದು ಬಂದ ಮಾಡಿದ್ದರಿಂದ ಸಾವಿರಾರು ಕುಟುಂಬಗಳಿಗೆ ಜೀವನೋಪಾಯದ ಸಮಸ್ಯೆ ಉಂಟಾಗಿದೆ. ಈ ಹಿಂದಿನ ವರ್ಷಗಳಲ್ಲಿ ಚಟುವಟಿಕೆಗಳು ಬಂದ ಮಾಡಿರಲಿಲ್ಲ. ಅದೇ ರೀತಿ ನಮ್ಮ ತಂಡವು ಬೇರೆಡೆಗೆ ಪ್ರವಾಹ ಬಂದಾಗ ಸಹಾಯ ಕಾರ್ಯಕ್ಕೆ ತಕ್ಷಣ ಹಾಜರಾಗುತ್ತದೆ. ಆದರೆ ಚಟುವಟಿಕೆಗಳನ್ನು ಬಂದ ಮಾಡಿದ್ದರಿಂದ ರೆಸಕ್ಯೂ ತಂಡ ಕೂಡ ರಜೆ ಮೇಲಿದೆ. ಅನೇಕ ಹೋಮ ಸ್ಟೇ ಗಳ ಮಾಲಿಕರು ಸಾಲದ ಸುಳಿವಿಗೆ ಸಿಲುಕಿದ್ದಾರೆ.

ಪ್ರವಾಸೋದ್ಯಮ ಬಂದ ಇರುವದರಿಂದ ಅವಲಂಬಿತ ಸಾವಿರಾರು ಕುಟುಂಬದ ಜೀವನೋಪಾಯದ ಸಮಸ್ಯೆ ಇದೆ. ಆದಷ್ಟು ಬೇಗ ಚಟುವಟಿಕೆಗಳನ್ನು ಆರಂಭಿಸುವಂತೆ ಜಿಲ್ಲಾಧಿಕಾರಿ ಅವರಲ್ಲಿ ವಿನಂತಿ ಮಾಡಲಾಯಿತು. ಮಾನ್ಯ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ರವರು ಸಮಸ್ಯೆಯ ಗಾಂಭೀರ್ಯ ತನಗೆ ಗೊತ್ತಿದೆ, ಆದಷ್ಟು ಬೇಗ ಪರಿಹಾರ ಮಾಡಲಾಗುವದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಿಸೋರ್ಟ್ ಮಾಲಿಕರ ಸಂಘದ ಅಲೀಮ್ ಬಸರಿಕಟ್ಟಿ, ವಿನಾಯಕ್ ಜಾಧವ, ಉಮೇಶ್ ಜಿ ಇ, ಮಹಾಂತೇಶ ಕಾಗತಿಕರ್, ಕಾಳಿ ಪ್ರವಾಸೋದ್ಯಮ ಸಂಸ್ಥೆಯ ಅಧ್ಯಕ್ಷ ರವಿ ರೇಡಕರ್, ದಿನೇಶ್ ಸಾನು, ಶಾಮ್ ನಾಯಕ್, ಏರೋನ ವರ್ಥ್ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಹಾಯಕ ಕಮಿಷನರ್ ಶಾಲಂ ಹುಸೇನ್ ಹಾಗು ಅಪರ್ ಜಿಲ್ಲಾಧಿಕಾರಿ ಸಾಜಿದ್ ಅಹಮದ್ ಮುಲ್ಲಾ ಇವರನ್ನೂ ಭೆಟ್ಟಿ ಯಾಗಿ ಮನವಿ ನೀಡಲಾಯಿತು.