Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಗಾಂಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಮಲಕರ್ಣಿಯಲ್ಲಿ ದೀಪಾವಳಿಯ ಹಬ್ಬದ ನಿಮಿತ್ತ ಏಳು ದಿನಗಳ ಕಾಲ ನಡೆಯುವ ಶ್ರೀಕೃಷ್ಣ ಮೂರ್ತಿಯ ಪೂಜನ ಕಾರ್ಯಕ್ರಮ ಸಂಭ್ರಮದಿಂದ ಆರಂಭಗೊಂಡಿತು.

Banner Ad

ದಿನಾಂಕ:20-10-2025 ರಂದು ಸೋಮವಾರ ಬೆಳಿಗ್ಗೆ ಶ್ರೀ ದೇವರ ಮೂರ್ತಿಯ ಸ್ಥಾಪನೆಯಾಯಿತು. ಏಳು ದಿನಗಳ ಕಾಲ ದಿನಾಲು ಬೆಳಿಗ್ಗೆ ಮತ್ತು ಸಂಜೆ ಆರತಿ ಕಾರ್ಯಕ್ರಮ, ಸುತ್ತಮುತ್ತಲಿನ ಗ್ರಾಮದ ಯುವಕ,ಯುವತಿಯರಿಂದ ದಾಂಡಿಯಾ ನೃತ್ಯ,ಹಿರಿಯರು,ಪುರುಷರು,ಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. 26-10-2025 ರಂದು ರವಿವಾರ ಏಳನೇಯ ದಿನ ಬೆಳಿಗ್ಗೆ ಶ್ರೀ ಸತ್ಯನಾರಾಯಣ ದೇವರ ಪೂಜೆ,ತೀರ್ಥ,ಪ್ರಸಾದ ವಿತರಣೆ.ಮಧ್ಯಾಹ್ನ ಅನ್ನಪ್ರಸಾದ,ಸಂಜೆ ಭಜನಾ ಕಾರ್ಯಕ್ರಮ,ಶ್ರೀ ದೇವರ ಫಲಪ್ರಸಾದಗಳ ಸವಾಲ ಕಾರ್ಯಕ್ರಮ, ಭಕ್ತರ ಮೆರವಣಿಗೆಯ ಮೂಲಕ ಮೂರ್ತಿ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ.ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವರ ಕೃಪೆಗೆ ಪಾತ್ರರಾಗಬೇಕೆಂದು ಸಂಘಟಕರು ವಿನಂತಿಸಿದ್ದಾರೆ.

Banner Ad