ಸುದ್ದಿ ಕನ್ನಡ ವಾರ್ತೆ

ಜೋಯಿಡಾ :ಪರಿಸರ ಸೂಕ್ಷ್ಮ ವಲಯ (ಇಎಸ್ಎ) ಅಧಿಸೂಚನೆ ರದ್ದುಪಡಿಸಲು ಆಗ್ರಹಿಸಿ ಇದೇ ದಿನಾಂಕ 19 ರ ಶನಿವಾರ ಬೆಳಿಗ್ಗೆ ಯಿಂದ ಮಧ್ಯಾಹ್ನ ದ ವರೆಗೆ ಜೋಯಿಡಾದಲ್ಲಿ ಕಾಳಿ ಬ್ರಿಗೇಡ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ, ನಡೆಸಲು ತೀರ್ಮಾನಿಸಲಾಗಿದೆ.

ಜೋಯಡಾದ ಕುಣಬಿ ಭವನದಲ್ಲಿ ನಡೆದ ಜೋಯಿಡಾ ತಾಲೂಕಿನ ಸಾರ್ವಜನಿಕ ಸಭೆಯಲ್ಲಿ ಈ ಕೆಳಗಿನಂತೆ ತೀರ್ಮಾನ ತೆಗೆದುಕೊಳ್ಳ ಲಾಯಿತು.

ಕಸ್ತೂರಿ ರಂಗನ್ ವರದಿ ಇದು ನೈಜತೆಯನ್ನು ಮರೆ ಮಾಚಿದೆ. ಈಗಾಗಲೇ ಜೋಯಡಾ ತಾಲ್ಲೂಕು ಗಣಿಗಾರಿಕೆ, ಜಲವಿದ್ಯುತ್ ಯೋಜನೆಗಳು, ಅರಣ್ಯ ಡಿಪೊ, ಬಾಂಬು ಕಟಾವು, ಕಾಳಿ ಹುಲಿ ಯೋಜನೆ, ಹಾರ್ನ್ ಬಿಲ್ ಸಂರಕ್ಷಿತ ಪ್ರದೇಶ, ಇಂತಹ ಅನೇಕ ಯೋಜನೆಗಳ ಜಾರಿಯಿಂದಾಗಿ ತಾಲ್ಲೂಕಿನ ಜನ ಸಂಕಷ್ಟ ದಲ್ಲಿ ಇದ್ದಾರೆ. ರಸ್ತೆ, ವಿದ್ಯುತ್, ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯಗಳು ಪೂರೈಸಲು ಸಾಕಷ್ಟು ತೊಂದರೆ ಆಗುತ್ತಿದೆ. ಉದ್ಯೋಗಾವಕಾಶಗಳನ್ನು ಇಲ್ಲದೆ ಯುವಕರು ಬೇರೆ ರಾಜ್ಯಗಳಿಗೆ ಸ್ಥಳಾಂತರ ಗೊಳ್ಳುತ್ತಿದ್ದಾರೆ.

ಒಂದಾನುವೇಳೆ ಇಎಸ್ಎ ಅಂತಿಮ ಆದೇಶ ಜಾರಿ ಗೊಂಡರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಅದ್ದರಿಂದ ಅವೈಜ್ಞಾನಿಕ ಮತ್ತು ಅಸಮರ್ಪಕ ವಾದ ಕಸ್ತೂರಿ ರಂಗನ್ ವರದಿ ಆಧಾರಿತ ಈ ಅಧಿಸೂಚನೆ ರದ್ದುಪಡಿಸಲು ಅಗ್ರಹಿಸಿ ಉಗ್ರವಾದ ಹೋರಾಟ ನಡೆಸುವ ಬಗ್ಗೆ ಮತ್ತು ಈ ಹೋರಾಟದ ನೇತೃತ್ವ ಕಾಳಿ ಬ್ರಿಗೇಡ್ ವಹಿಸಬೇಕು ಎಂದು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಮಾಡಲಾಯಿತು. ದಿನಾಂಕ 19 ಸೆಪ್ಟೆಂಬರ್ ,ಶನಿವಾರದಂದು ಜೋಯಡಾದ ಶಿವಾಜಿ ವೃತ್ತದಲ್ಲಿ ಸಭೆ ಸೇರಿ ಅಲ್ಲಿಂದ ಮೆರವಣಿಗೆ ಮೂಲಕ ತಾಲ್ಲೂಕಾ ಕಚೇರಿಗೆ ಬಂದು ಮಾನ್ಯ ತಹಶಿಲ್ದಾರರ ಮುಖಾಂತರ ರಾಜ್ಯ ಹಾಗು ಕೇಂದ್ರ ಸರಕಾರಕ್ಕೆ ತಕರಾರು ಮನವಿ ಸಲ್ಲಿಸುವ ಬಗ್ಗೆ ನಿರ್ಣಯ ಮಾಡಲಾಯಿತು. ಕಸ್ತೂರಿ ರಂಗನ್ ವರದಿ ಸಂಪೂರ್ಣವಾಗಿ ರದ್ದುಪಡಿಸಬೇಕು, ಹೊಸದಾಗಿ ಜಿಲ್ಲಾವಾರು ಅಧ್ಯಯನ ನಡೆಸಿ ವರದಿ ಪಡೆಯಲು ಸರಕಾರಕ್ಕೆ ಅಗ್ರಹಿಸುವ ಬಗ್ಗೆ ನಿರ್ಣಯ ಮಾಡಲಾಯಿತು. ಮಾನ್ಯ ಶಾಸಕರು ಹಾಗು ಮಾನ್ಯ ಸಂಸದರಿಗೂ ಮನವಿ ಕೊಡುವ ಬಗ್ಗೆ ತಿರ್ಮಾನ ಮಾಡಲಾಯಿತು. ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ಸುನೀಲ್ ದೇಸಾಯಿ ಮತ್ತು ಮುಖ್ಯ ಸಮಿತಿ ಅಧ್ಯಕ್ಷ ಸತೀಶ್ ನಾಯ್ಕ್ ಸಭೆಯ ಸಂಯೋಜನೆ ಮಾಡಿದ್ದರು. ಉಮೇಶ್ ವೇಳಿಪ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಕರ್ನಾಟಕ ಕಿಸಾನ್ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ರೇಡಕರ್ ಹೋರಾಟಕ್ಕೆ ಮಾರ್ಗದರ್ಶನ ಮಾಡಿದರು.

 

ಈ ಸಂದರ್ಭದಲ್ಲಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸುಧಾಕರ್ ದೇಸಾಯಿ , ಹಿರಿಯರಾದ ರಫಿಕ್ ಖಾಜಿ, ಕೆ ಎಲ್ ನಾಯ್ಕ್, ಶ್ರೀಕಾಂತ ಟೆಂಗ್ಸೆ, ಗೋಪಾಲ್ ಭಟ್ಟ್, ಶಾಮ್ ಪೋಕಳೆ, ಕುಣಬಿ ಸಮಾಜ ಅಧ್ಯಕ್ಷ ಪ್ರೇಮಾನಂದ ವೇಳಿಪ್, ಕಾರ್ಯದರ್ಶಿ ದಯಾನಂದ, ಪ್ರಸನ್ನ ಗಾವಡಾ, ಕಾಂಗ್ರೆಸ್ ಧುರಿಣ ವಿನಯ ದೇಸಾಯಿ, ಜೋಯಡಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದೇವಿದಾಸ್ ದೇಸಾಯಿ, ಕಾಳಿ ಪ್ರವಾಸೋದ್ಯಮ ಸಂಸ್ಥೆಯ ಕಾರ್ಯದರ್ಶಿ ಸುದರ್ಶನ ಹೆಗಡೆ, ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಅಜಿತ್ ಗಾವಡಾ, ಕಾಳಿ ಬ್ರಿಗೇಡ್ ಕಾರ್ಯದರ್ಶಿ ಸಮಿರ್ ಮುಜಾವರ್, ಸಂಜೀವನಿ ಸೇವಾ ಟ್ರಸ್ಟ್ ಖಜಾಂಚಿ ಪ್ರಭಾಕರ್ ನಾಯ್ಕ್, ಕಾಳಿ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಶುಭೇಂದು ಕಾಮತ್, ಅಂಬಾರಿ ಕ್ವಿನ್ಸ ಟ್ರಸ್ಟಿನ ಭವಾನಿ ಚವ್ಹಾಣ, ದತ್ತಾರಾಮ ದೇಸಾಯಿ, ಬಾಜಾರಕುಣಂಗ ಗ್ರಾ ಪಂ ಮಾಜಿ ಉಪಾಧ್ಯಕ್ಷ ಅಜಿತ್ ಮಿರಾಶಿ, ಮರಾಠಾ ಸಮಾಜದ ಮುಖಂಡ ಚಂದ್ರಕಾಂತ ದೇಸಾಯಿ, ಸೇರಿದಂತೆ ಜಗಲಬೇಟ, ಪ್ರಧಾನಿ, ಗುಂದ, ಉಳವಿ, ಕುಂಭಾರವಾಡಾ, ಅಣಸಿ , ನಾಗೋಡಾ, ಗ್ರಾಮ ಪಂಚಾಯತಿ ಗಳಿಂದ ನೂರಾರು ಜನರು ಸಭೆಯಲ್ಲಿ ಭಾಗ ವಹಿಸಿದ್ದರು.