ಸುದ್ದಿ ಕನ್ನಡ ವಾರ್ತೆ
ಜೋಯಿಡಾ :ತಾಲೂಕಿನಲ್ಲಿ ಶ್ರೀ ಗಣೇಶ ಹಬ್ಬದ ತಯಾರಿ ಭರದಿಂದ ನಡೆದಿದೆ. ಬರುವ ದಿನಾಂಕ 14 ರಂದು ಶ್ರೀ ಗೌರಿ ಗಣೇಶನನ್ನು ಭಕ್ತರು ಭಯ ಭಕ್ತಿಗಳಿಂದ ಪೂಜಿಸಿ ಕೃತಾರ್ಥರಾಗುತ್ತಾರೆ.

ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯಿಂದ ದೇಶದಾದ್ಯಂತ ಆದಿ ಪೂಜಿಪ ಗಣೇಶನನ್ನು ಭಾರತೀಯರು ಪೂಜಿಸಿ ತಮ್ಮ ಇಷ್ಟಾರ್ಥಗಳು ಈಡೇರಲಿ ಎಂದು ಬೇಡಿಕೊಳ್ಳುವ ದಿನ. ಈ ದಿನ ಜನರು ತನು ಮನ ಧನದಿಂದ ಶ್ರೀ ಗಣೇಶನನ್ನು ಆರಾಧಿಸಿ ಕೃತಾರ್ಥರಾಗುತ್ತಾರೆ. ಸಾರ್ವಜನಿಕವಾಗಿ ಕೂಡ ಭಕ್ತರು ಗಣೇಶನನ್ನು ವಿವಿಧ ಸ್ಥಳಗಳಲ್ಲಿ ತಮ್ಮ ಶಕ್ತಿನುಗುಣವಾಗಿ ಪೂಜಿಸಿ ಭಜಿಸುತ್ತಾರೆ. ಆ ಮೂಲಕ ಸಾರ್ವಜನಿಕರಿಗೆ ಶ್ರೀ ಗಣೇಶನ ಆರಾಧಿಸುವ ಭಾಗ್ಯ ಕಲ್ಪಿಸುತ್ತಾರೆ. ಹಾಗಾಗಿ ಶ್ರೀ ಗಣೇಶನ ಪೂಜೆಯನ್ನು ಚತುರ್ಥಿಯಿಂದ ಚತುರ್ದಶಿ ವರೆಗೆ ಆರಾಧಿಸಿ ನಂತರ ವಿಸರ್ಜಿಸುವುದು ಇದೆ. ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮನರಂಜನೆಗಳು ವಿವಿಧ ಸ್ಪರ್ಧೆಗಳನ್ನು ಕೂಡ ಸಂಘಟಕರು ನಡೆಸಿ ತಮ್ಮ ಊರಿನ ಸೊಬಗನ್ನು ಹೆಚ್ಚಿಸುತ್ತಾರೆ.

ಈ ಸಲದ ಸಾರ್ವಜನಿಕ ಉತ್ಸವವನ್ನು ಭಯ ಭಕ್ತಿಯಿಂದ ಆಚರಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಆರಕ್ಷಕ ಇಲಾಖೆ ಕ್ರಮ ಕೈಗೊಂಡಿದೆ. ಗಣೇಶನ ಮೂರ್ತಿ ತಯಾರಿಸುವಲ್ಲಿ ಮೂರ್ತಿ ತಯಾರಕರು ತಿಂಗಳುಗಳ ಕಾಲ ಮಣ್ಣಿ ನೊಂದಿಗೆ ಕೈಚಳಕ ತೋರಿಸಿ ಮೂರ್ತಿ ತಯಾರಿಸಿ,ಬಣ್ಣದೊಂದಿಗೆ ಅಲಂಕರಿಸುವದು ಒಂದು ದೊಡ್ಡ ಸಾಧನೆಯೇ ಸರಿ, ಆ ಕೆಲಸ ವನ್ನು ತಾಲೂಕಿನಲ್ಲಿ ಹಲವಾರು ಜನರು ಅನಾದಿ ಕಾಲದಿಂದ ನಡೆಸಿಕೊಂಡು ಬಂದಿದ್ದಾರೆ. ಯಾವುದೇ ವಿಶೇಷ ಪಲಾಪೇಕ್ಷೆ ಇಲ್ಲದೇ ಕಲೆಯನ್ನು ಆರಾದಿಸುತ್ತಿದ್ದಾರೆ. ಒಟ್ಟಾರೆ ಗಣೇಶನ ಹಬ್ಬದ ಗಮ್ಮತ್ತು ವಿಶೇಷ ಭಕ್ಷ ಗಳ ಸಮಾರಾಧನೆ ಯೊಂದಿಗೆ ಆರಂಭ ವಾಗಲಿದೆ.
