ಸುದ್ದಿ ಕನ್ನಡ ವಾರ್ತೆ
ಶಿರಸಿ: ಪವಿತ್ರ ಶ್ರಾವಣ ಮಾಸದ ಅಮಾವಾಸ್ಯೆಯ ವಿಶೇಷ ಪರ್ವಕಾಲದಲ್ಲಿ ಸಹಸ್ರ ಲಿಂಗಾರ್ಚನೆ ಪೂಜೆಯು ಅತ್ಯಂತ ವಿಜೃಂಭಣೆ ಹಾಗೂ ಶ್ರದ್ಧಾ-ಭಕ್ತಿಯಿಂದ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಗುರುವಾರ ರಾತ್ರಿ ನೆರವೇರಿತು.

ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಹಾಗೂ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಈ ಧಾರ್ಮಿಕ ಆಚರಣೆ ಜರುಗಿತು. ಮಣ್ಣಿನಿಂದ 1000 ಲಿಂಗಗಳನ್ನು ತಯಾರಿಸಿ, ಅವುಗಳಲ್ಲಿ ದೇವತೆಗಳನ್ನು ವಿಧಿಪೂರ್ವಕವಾಗಿ ಆವಾಹನೆ ಮಾಡಿ ಶ್ರಾವಣ ಅಮಾವಾಸ್ಯೆಯ ಪುಣ್ಯಕಾಲದಲ್ಲಿ ವಿಶೇಷ ಅಭಿಷೇಕ, ಪೂಜೆ ಹಾಗೂ ಮಹಾ ಅರ್ಚನೆಗಳನ್ನು ಶಾಸ್ತ್ರೋಕ್ತವಾಗಿ ನಡೆಸಲಾಯಿತು.