ಸುದ್ದಿ ಕನ್ನಡ ವಾರ್ತೆ
ಜೊಯಿಡಾ : ರಾಮನಗರದ ಸರಕಾರಿ ಆಸ್ಪತ್ರೆ ಯಲ್ಲಿ ಬರುವ ಮಂಗಳವಾರ ದಿನಾಂಕ 7ರಂದು ತಾಲೂಕು ಮಟ್ಟದ ಬೃಹತ್ ಆರೋಗ್ಯ ಶಿಬಿರ ವನ್ನು ಹಮ್ಮಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಆರೋಗ್ಯ ದಿಚಾರಣೆಯ ಅಂಗವಾಗಿ ಈ ಆರೋಗ್ಯ ಶಿಬಿರ ನಡೆಯುತ್ತಿದೆ. ಬೆಳಿಗ್ಗೆ 9ಘಂಟೆಯಿಂದ ಸಾಯಂಕಾಲ 5ಘಂಟೆ ಯ ವರೆಗೆ ನಡೆಯುವ ಈ ಶಿಬಿರ ದಲ್ಲಿ ಉಚಿತ ಆರೋಗ್ಯ ತಪಾಸಣೆ, ವೈದ್ಯಕೀಯ ಸಲಹೆ, ಗಳನ್ನು ಪಡೆಯಬಹುದು.ಆದ್ದರಿಂದ ತಾಲೂಕಿನ ಆಸಕ್ತರು ಕಾರ್ಯಕ್ರಮ ದಲ್ಲಿ ಭಾಗವಹಿಸಿ ಲಾಭ ಪಡೆದು ಕೊಳ್ಳಲು ತಾಲೂಕಾ ಆರೋಗ್ಯಾಧಿಕಾರಿ ಡಾ :ಸುಜಾತಾ ಉಕ್ಕಲಿ ಅವರು ತಿಳಿಸಿರುತ್ತಾರೆ.
