Banner Ad

ಸುದ್ದಿ ಕನ್ನಡ ವಾರ್ತೆ

ಸಾಗರಮಾಲ ಯೋಜನೆಯಡಿ ನಡೆಯುತ್ತಿರುವ ಶಿರಸಿ ಹಾವೇರಿ ರಸ್ತೆಯ ಕಾಮಗಾರಿಯ ವಿಳಂಬದಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಹಿನ್ನಲೆಯಲ್ಲಿ ಮೇ 12 ರಂದು ಬೆಳಿಗ್ಗೆ 10 ಘಂಟೆಗೆ ಶಿರಸಿ ತಾಲೂಕಿನ ಚಿಪಗಿ ಪೋಲಿಸ್ ನಾಕಾ ಹತ್ತಿರ ವಿವಿಧ ಸಂಘಟನೆ, ಶಾಲಾ ಕಾಲೇಜು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಜೊತೆಗೂಡಿ ಪ್ರತಿಭಟನೆ ಮೂಲಕ ರಸ್ತೆ ತಡೆ ಕಾರ್ಯಕ್ರಮನಡೆಸಲು ನಿರ್ಧರಿಸಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ್ ಗೌಡ ತಿಳಿಸಿದ್ದಾರೆ.

Banner Ad

ಕಾಮಗಾರಿ ವಿಳಂಬದಿಂದ ಹಾಗೂ ಗುತ್ತಿಗೆದಾರನ ನಿರ್ಲಕ್ಷದಿಂದ ಪ್ರತಿನಿತ್ಯ ಶಿರಸಿಯಿಂದ ಹುಬ್ಬಳ್ಳಿ ಕಡೆಗೆ ಹಾಗೂ ಶಿರಸಿ, ಹಾವೇರಿ, ಬೆಂಗಳೂರು ಕಡೆಗೆ ಓಡಾಡುವ ಶಾಲಾ ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿ ಕರು, ವಯೋವೃದ್ಧರು, ಹಾಗೂ ರಸ್ತೆಯ ಅಕ್ಕಪಕ್ಕದಲ್ಲಿರುವ ಮನೆಗಳಿಗೆ ಶಾಲಾ ಕಾಲೇಜುಗಳಿಗೆ ರಸ್ತೆಯನ್ನು ಅಗೆದು ಹಾಕಿರುವುದರಿಂದ ಕಳೆದ 1 ವರ್ಷಕ್ಕಿಂತ ಹೆಚ್ಚಿನ ದಿನಗಳಿಂದ ನರಕಯಾತನೆಯಾಗಿದೆ ಈ
ಹಿನ್ನಲೆಯಲ್ಲಿ ಕೂಡಲೇ ಜಿಲ್ಲಾಧಿಕಾರಿಗಳು ಜನಪ್ರತಿನಿಧಿಗಳು,ಅಧಿಕಾರಿಗಳು ಹಾಗೂ ಮೂಲ ಗುತ್ತಿಗಾರನ ಜೊತೆಗೆ ಚಿಪಗಿ ಪೋಲಿಸ್ ನಾಕಾದಿಂದ ಬಿಸಲಕೊಪ್ಪವರೆಗೆ ಕಾಲ್ನಡಿಗೆ ಮೂಲಕ ಕಾಮಗಾರಿಯನ್ನು ಪರಿಶೀಲಿಸಿ ಚಿಪಗಿ ಪೋಲಿಸ್ ನಾಕದಿಂದ ಹಾನಗಲ್ ಕ್ರಾಸ್ ವರೆಗೆ ಪರಿಶೀಲಿಸಿ ಜನರಿಗಾಗುವ ತೊಂದರೆಗಳನ್ನು ಮನಗಂಡು ಮಳೆಗಾಲದ ಪೂರ್ವದಲ್ಲಿ ಅಗೆದು ಹಾಕಿರುವ ರಸ್ತೆಗೆ ಡಾಂಬರೀಕರಣ ಮಾಡಿ ಜನರಿಗಾಗುವ ತೊಂದರೆಗಳನ್ನು ಬಗೆಹರಿಸಲು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದೇ ಇದ್ದಲ್ಲಿ ಮೇ 12 ರಂದು ಬೆಳಿಗ್ಗೆ 10 ಘಂಟೆಗೆ ಶಿರಸಿ ತಾಲೂಕಿನ ಚಿಪಗಿ ಪೋಲಿಸ್ ನಾಕಾ ಹತ್ತಿರ ವಿವಿಧ ಸಂಘಟನೆ, ಶಾಲಾ ಕಾಲೇಜು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಜೊತೆಗೂಡಿ, ಪ್ರತಿಭಟನೆ ಮೂಲಕ ರಸ್ತೆ ತಡೆಯನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Banner Ad