Banner Ad

ಸುದ್ದಿ ಕನ್ನಡ ವಾರ್ತೆ
ಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಪರಾಭವನಾಮ ಸಂವತ್ಸರದ ವಸಂತ ಋತು, ಚೈತ್ರ ಶುದ್ಧ ಪಾಡ್ಯ, ಗುರುವಾರದಂದು ಚಾಂದ್ರಮಾನ ಯುಗಾದಿಯ ಆಚರಣೆ ನಡೆಯಿತು.

ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪರಾಭವ ನಾಮ ಸಂವತ್ಸರದ ಪಂಚಾಂಗ ಶ್ರವಣ, ಪಾನಕ ಪೂಜೆ ಕಾರ್ಯಕ್ರಮಗಳು ನೆರವೇರಿತು.

Banner Ad

ಡಾ. ಕೃಷ್ಣ ಜೋಶಿ ಮೂಲೆಮನೆ ಈ ವರ್ಷದ ಶುಭಾಶುಭ ಫಲಗಳನ್ನು ವಿವರಿಸಿ ಪಂಚಾಂಗವನ್ನು ಪಠಿಸಿದರು, ಪುರೋಹಿತರಾದ ವೇದಮೂರ್ತಿ ಚಿನ್ಮಯ ಜೋಶಿ, ಪಾಠಶಾಲೆಯ ಅಧ್ಯಾಪಕರುಗಳು, ವಿದ್ಯಾರ್ಥಿಗಳು, ಗ್ರಾಮದವರು, ಶಿಷ್ಯಭಕ್ತರು ಉಪಸ್ಥಿತರಿದ್ದರು.

Banner Ad