Banner Ad

ಸುದ್ದಿ ಕನ್ನಡ ವಾರ್ತೆ
​ದಾಂಡೇಲಿ: ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಹೆಮ್ಮೆಯ ತನಿಖಾ ಶ್ವಾನ ‘ಕ್ವೀಪರ್’ (ಕ್ರೈಮರ್ ಶ್ವಾನ) ವಯೋಸಹಜ ಕಾರಣದಿಂದ ಮೃತಪಟ್ಟಿದೆ.

 

Banner Ad

ಅರಣ್ಯ ಇಲಾಖೆಯ ವತಿಯಿಂದ ಕಾಳಿ ವನ್ಯಜೀವಿ ವಲಯದಲ್ಲಿ ಗೌರವಯುತ ಅಂತಿಮ ಸಂಸ್ಕಾರವನ್ನು ಶುಕ್ರವಾರ ನೆರವೇರಿಸಲಾಯಿತು. 2016ರ ಜನವರಿ 18ರಿಂದ ಅಕ್ಟೋಬರ್ 12, 2016ರವರೆಗೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಬಿ.ಎನ್.ಎಸ್. ಶ್ವಾನ ತರಬೇತಿ ಕೇಂದ್ರದಲ್ಲಿ ವಿಶೇಷ ತರಬೇತಿ ಪಡೆದಿದ್ದ ‘ಕ್ವೀಪರ್’ ಶ್ವಾನವನ್ನು ನಂತರ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹಂಚಿಕೆ ಮಾಡಲಾಗಿತ್ತು.

2016ರಿಂದ 2026ರವರೆಗೆ ಸುದೀರ್ಘ 10 ವರ್ಷಗಳ ಕಾಲ ತನ್ನ ಕರ್ತವ್ಯವನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಿದ ಈ ಶ್ವಾನ, ಕೆನರಾ ವೃತ್ತದ ವಿವಿಧ ವಿಭಾಗಗಳಲ್ಲಿ ನಡೆದ ಅರಣ್ಯ ಅಪರಾಧಗಳ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಒಟ್ಟು 44 ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಗೆ ಅಗತ್ಯ ಸುಳಿವು ನೀಡುವಲ್ಲಿ ಯಶಸ್ವಿಯಾಗಿತ್ತು. ಅದರಲ್ಲೂ ಜೋಯಿಡಾ ವ್ಯಾಪ್ತಿಯಲ್ಲಿ ನಡೆದ ಚಿರತೆ ಚರ್ಮ ಪತ್ತೆ ಪ್ರಕರಣ, ಅಕ್ರಮ ನಾಡ ಬಂದೂಕು ಪ್ರಕರಣಗಳು ಹಾಗೂ ಅಕ್ರಮ ಕಡವೆ ಬೇಟೆ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವಲ್ಲಿ ‘ಕ್ವೀಪರ್’ನ ಪಾತ್ರ ಮಹತ್ವದ್ದಾಗಿತ್ತು.

Banner Ad