ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತದ ವ್ಯಾಪ್ತಿಯ ಅವುರ್ಲಿ ಶಾಲೆಯಲ್ಲಿ ನಡೆದ ಶ್ರೀ ಶಾರದಾ ದೇವಿಯ ಪೂಜಾ ಕಾರ್ಯಕ್ರಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿ ಸುದರ್ಶನ ಸೋಮಣ್ಣ ವೇಳಿಪ ಚಕ್ರ ಎಸೆತ ಸ್ಪರ್ಧೆಯಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ ಬಗ್ಗೆ ಹಾಗೂ ಶಾಲೆಯು 50ನೇ ವರ್ಷದ ಸುವರ್ಣ ಮಹೋತ್ಸವ ದ ಸಂದರ್ಭದಲ್ಲಿ ಶಾಲೆಯು ಪ್ರಾರಂಭವಾದ ವರ್ಷದಿಂದ ಈವರೆಗೆ ತಾಲೂಕಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಪ್ರಥಮ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಕ್ಕೆ ಶಾಲೆಯ ಶಿಕ್ಷಕರು,ಗಣ್ಯರು,ಗ್ರಾಮಸ್ಥರು ಸನ್ಮಾನಿಸಿದರು.
ಸನ್ಮಾನ ಸಮಾರಂಭದ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಬೀರಪ್ಪ ಉರ್ಮಿ,ಅತಿಥಿ ಶಿಕ್ಷಕರಾದ ರತ್ನಾಕರ ತೆಲೋಲಿಕರ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು/ ಪಾಲಕರಾದ ಸೋಮಣ್ಣ ವೇಳಿಪ, ಉಪಾಧ್ಯಕ್ಷರಾದ ಸುದೇಶ ಸಾವಂತ,ಸದಸ್ಯರಾದ ಗಜಾನನ ವೇಳಿಪ,ರಾಘವೇಂದ್ರ ನಾಯ್ಕ ಅಧ್ಯಕ್ಷರು, ಅವುರ್ಲಿ ಪರಿಸರ ಅಭಿವೃದ್ಧಿ ಸಮಿತಿ,ಶಾಲೆಯ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರಾದ ರಾಜು ವೇಳಿಪ, ಪ್ರೀತಿನಂದ ಶೇಟಕರ, ಅವುರ್ಲಿ ಪರಿಸರ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀಕೃಷ್ಣ ವೇಳಿಪ (ತಾತ),ನಂದಿಗದ್ದೆ ಗ್ರಾಮ ಪಂಚಾಯತದ ನಿಕಟ ಪೂರ್ವ ಸದಸ್ಯರಾದ ಧವಳೋ ಗಣೇಶ ಸಾವರ್ಕರ,ಕಾರ್ಟೋಳಿ ಶಾಲೆಯ ಮುಖ್ಯ ಶಿಕ್ಷಕರಾದ ವಿನಾಯಕ ಪಟಗಾರ, ಖಾನಗಾಂವ ಶಾಲೆಯ ಮುಖ್ಯ ಶಿಕ್ಷಕರಾದ ಶಾಂತಕುಮಾರ ಎಸ್.ಕೆ, ಮುಡಿಯೇ ಶಾಲೆಯ ಮುಖ್ಯ ಶಿಕ್ಷಕರಾದ ಭರಮಗೌಡ, ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಸಂಜಯ ದೇಸಾಯಿ, ಪ್ರವೀಣ ವೇಳಿಪ, ಸದಸ್ಯರಾದ ಗಣೇಶ ವೇಳಿಪ, ಬಾಲಚಂದ್ರ ವೇಳಿಪ, ಶ್ರೀಕಾಂತ ಮಿರಾಶಿ,ಸದಾನಂದ ದೇವದಾಸ,ಭಿಕ್ಕು ಪಾಡಕರ, ಮಹಿಳಾ ಸದಸ್ಯರು,ಇನ್ನುಳಿದ ಶಾಲೆಯ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲೆಯ ಹಳೆಯ ವಿದ್ಯಾರ್ಥಿಯಾದ ಶೇಖರ ಪಾಡಕರ ಕಾರ್ಯಕ್ರಮ ನಿರೂಪಿಸಿದರು.
