ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಬೇಡ್ತಿ ಅಗನಾಶಿನಿ ನದಿ ತಿರುವು ಯೋಜನೆ ಮುಂದುವರಿಯದಂತೆ, ಹಾಗೂ ಅಡಿಕೆ ತೋಟಕ್ಕೆ ಎಳೆಚುಕ್ಕಿ ರೋಗ ಬಾದೆ ಬಾರದಂತೆ ಪ್ರಾರ್ಥಿಸಿ ಚಂದಗುಳಿಯ ಶ್ರೀ ಸಿದ್ಧಿ ವಿನಾಯಕ ಗಂಟೆ ಗಣಪತಿ ದೇವಸ್ಥಾನದಲ್ಲಿ ಸೆ 29ರಂದು ಅಂಗಾರಕ ಸಂಕಷ್ಟಿಯೆಂದು ವಿಶೇಷ ಹರಕೆಯ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದೇ ಸಂಕಲ್ಪಾಗಿ ಈಗಾಗಲೇ 21,000 ಉಪನಿಷತ್ ಪಾರಾಯಣ ಪೂರ್ಣಗೊಳಿಸಲಾಗಿದೆ. ಇದೇ ಸಂಕಲ್ಪದ ಭಾಗವಾಗಿ ಅಂಗಾರಕ ಸಂಕಷ್ಟಿಯೆಂದು ಅಥರ್ವಶೀರ್ಷ ಹವನ ನಡೆಯಲಿದೆ.
ಅಂದು ಆಗಮಿಸುವ ಎಲ್ಲ ಭಕ್ತರಿಗೆ ಮಹಾಪ್ರಸಾದ ಭೋಜನ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಚಂದಗುಳಿ ಗಂಟೆ ಗಣಪತಿ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ವೇ ಲಕ್ಷ್ಮೀನಾರಾಯಣ ಭಟ್ ತಿಳಿಸಿದ್ದಾರೆ.
