ಸುದ್ದಿ ಕನ್ನಡ ವಾರ್ತೆ

ಸಿದ್ದಾಪುರ ;ಗೆಜೆಟ್ ನೋಟಿಫಿಕೇಶನ್ ಆಗಿ ಒಂದು ವರ್ಷ ಕಳೆದರೂ ಸಹ ಸ್ಥಳೀಯ ಶಾಸಕರು ಸುಮ್ಮನ್ನಿದ್ದಾರೆ .ಸಚಿವ ಮಂಕಾಳ ವೈದ್ಯ ಸಹ ಸುಮ್ಮನ್ನಿದ್ದಾರೆ.ಮನೆ ಕೆಡವಲು ಹಾಗೂ ತೆರಿಗೆ ಹಣವನ್ನು ಪಡೆಯಬೇಡಿ ಎಂದು ಹೇಳಿರುವುದು ರಾಜ್ಯ ಸರ್ಕಾರ . ಆದರೆ ರಾಜ್ಯ ಸರ್ಕಾರ ತಪ್ಪು ಮಾಡಿದರೆ ಅದಕ್ಕೆ ಶಾಸಕರು ರಾಜೀನಾಮೆ ನೀಡಬೇಕೇ ಹೊರತು ಸಂಸದರಲ್ಲ . ಸ್ಥಳೀಯ ಶಾಸಕರು ತುಂಬಾ ಅಸಹಾಯಕರಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.

ತಾಲೂಕಿನ ಕಾನಸೂರಿನ ಗ್ರಾಮಪಂಚಾಯತಿ ಎದುರು ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ನಮ್ಮ ಮನೆ ನಮ್ಮ ಹಕ್ಕು ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು , ಒಂದು ವೇಳೆ ನೀವು ಒಂದು ಮನೆ ಕೆಡವಿದರೂ ಭಾರತೀಯ ಜನತಾ ಪಾರ್ಟಿ ಸುಮ್ಮನೇ ಇರುವುದಿಲ್ಲ . ಬಡವರ ಮನೆಯನ್ನು ಕೆಡವಿದರೆ ರಾಜೀನಾಮೆ ಕೊಡಿಸುತ್ತೇವೆ .ಈಗಾಗಲೇ ಸಂಸದರು ಬಡವರಿಗೆ ಅನ್ಯಾಯವಾದರೆ ಪಂಚಾಯತದ ಒಳಗೆ ಬಂದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಭಾರತೀಯ ಜನತಾ ಪಾರ್ಟಿ ಯಾವಾಗಲು ಬಡವರ ಪರವಾಗಿದೆ ಎಂದರು . ಭ್ರಷ್ಟ ಕಾಂಗ್ರೆಸ್ ಸರ್ಕಾರ ಜಾತಿ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದೆ. ಚುನಾವಣೆ ಸಮಯದಲ್ಲಿ ಮತದಾರರು ಚುನಾವಣೆ ನಂತರ
ಅತಿಕ್ರಮಣ ದಾರರು . ಬ್ರಿಟಿಷರಿಗಿಂತಲೂ ಕ್ರೂರತ್ವ ಕಾಂಗ್ರೆಸ್ ನಲ್ಲಿದೆ. ನಾವೆಲ್ಲರೂ ಒಂದೇ ಎಂದುಕೊಂಡು ಹೋರಾಟ ಮಾಡಬೇಕಿದೆ . ಕಾಂಗ್ರಸ್ ಸರ್ಕಾರ ಮಾಡುತ್ತಿರುವ ಅನ್ಯಾಯವನ್ನು ಸಹಿಸಲು ಸಾಧ್ಯವೇ ಇಲ್ಲ ಎಂದರು .

ಉತ್ತರ ಕನ್ನಡ ಜಿಲ್ಲೆ ಯಾರಿಗೂ ಬೇಡವಾದ ಕೂಸಾಗಿದೆ . ಯಾವ ಯೋಜನೆ ಬಂದರೂ ಮೊದಲು ನೆನಪಾಗುವುದೇ ಉತ್ತರ ಕನ್ನಡ ಜಿಲ್ಲೆ .ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಹೇಡಿಗಳಲ್ಲ ೧೫ ದಿನದಲ್ಲಿ ನಿಮ್ಮ ಆದೇಶವನ್ನು ವಾಪಾಸ್ ಪಡೇಯ ಬೇಕು . ಯಾವೊಬ್ಬ ಬಡವನಿಗೂ ನೋಟಿಸ್ ಹೋಗದಂತೆ ನೋಡಿಕೊಳ್ಳಬೇಕು ವಾಪಾಸ್ ಪಡೆಯದಿದ್ದರೆ ಉಗ್ರ ರೀತಿಯ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು .
ಸಂಘಟಿತ ಹೋರಾಟದಿಂದ ಮಾತ್ರ ಜಯ ಸಾಧ್ಯವಿದೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಬಲರಾಮ ನಾಮಧಾರಿ , ಕೃಷ್ಣಮೂರ್ತಿ ಹೆಗಡೆ , ವಿನಾಯಕ ಹೆಗಡೆ ,ಏನ್ ವಿ ಹೆಗಡೆ ,ಜಿ ಜಿ ದೇವಿಸರ ,ನಾಗರಾಜ ಕರಮನೆ , ಗಣೇಶ ಕಾನಸೂರು , ಮನೋಜ ಕಾನಸೂರು ,ಏನ್ ವಿ ಹೆಗಡೆ ಮಾದನಕಲ್ ಸೇರಿದಂತೆ ಹಲವರು ಇದ್ದರು .

ಮಳೆಯ ಕೊರತೆ ಯಿಂದ ಸಿದ್ದಾಪುರ ತಾಲೂಕಿನ ಹಲವು ಕಡೆ ಭತ್ತದ ಗದ್ದೆ ಗಳು ಒಣಗಿದೆ . ಆದರೆ ಸರಕಾರ ಇದುವರೆಗೂ ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಿಲ್ಲ .ಶಾಸಕರು ಯಾವ ನಿದ್ದೆ ಯಲ್ಲಿದ್ದಾರೆ . ಯಾಕೆ ಇನ್ನು ಶಿರಸಿ ಸಿದ್ದಾಪುರ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಿಲ್ಲ . ಬರ ಪೀಡಿತ ತಾಲೂಕಿನ ರೈತರಿಗೆ ಭಿಕ್ಷುಕರಿಗೆ ನೀಡಿದಂತೆ ೨.೫ ಸಾವಿರ ರು ನೀಡುತ್ತಾರಂತೆ . ರೈತರು ಬದುಕಲು ಸಾಧ್ಯವೇ ?ಮನುಷ್ಯತ್ವವೇ ಇಲ್ಲದ ಸರಕಾರ ಇದಾಗಿದೆ .ಕನಿಷ್ಠ ೨೫ ಸಾವಿರ ರು ಪರಿಹಾರ ಕೊಡಬೇಕು . ಸಿದ್ದಾಪುರ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು .