ಸುದ್ದಿ ಕನ್ನಡ ವಾರ್ತೆ
ಜೊಯಿಡಾ: ಉತ್ತರ ಕನ್ನಡ ಜಿಲ್ಲೆಯ ಕುಣಬಿ ಜನಾಂಗ ಪರಿಶಿಷ್ಟ ಪಂಗಡಕ್ಕೆ ಸೇರುವಂತೆ ಆಗ್ರಹಿಸಿ ಕುಣಬಿ ಸಮಾಜದ ಮುಖಂಡರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ರವರನ್ನು ಶಿರಸಿಯಲ್ಲಿ ಭೇಟಿ ಮಾಡಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಕೇಂದ್ರ ಸರ್ಕಾರ ಕುಣಬಿ ಗಳನ್ನು ಪರಿಶಿಷ್ಟ ಪಂಗಡ ಮಾಡಲು ದಿಟ್ಟ ನಿರ್ಧಾರ ಕೈಗೊಳ್ಳಲಿದೆ. ಮೈಸೂರು ವಿಶ್ವವಿದ್ಯಾಲಯದ ನೀಡಿದ ಅಧ್ಯಯನ ವರದಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಆರ್ ಜಿ ಐ ಅಂಗೀಕರಿಸಿ ನಂತರ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ತೀರ್ಮಾನ ಕೈಗೊಳ್ಳಲಾಗುತ್ತದೆ. ಗೋವಾ ಸಚಿವ ರಮೇಶ್ ತವಡಕರ್ ರವರು ಕಳೆದ ಅನೇಕ ವರ್ಷಗಳಿಂದ ಜಿಲ್ಲೆಯ ಕುಣಬಿ ಗಳ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದಾರೆ. ಅಕ್ಟೊಬರ್ 10 ರ ಒಳಗೆ ಸಮಾಜದ ಮುಖಂಡ ಜೊತೆ ಸಭೆ ಮಾಡಿ ಮುಂದಿನ ರೂಪುರೇಷೆ ರಚಿಸಿ ಕುಣಬಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರುವ ತೀರ್ಮಾನ ಮಾಡಲಾಗುತ್ತದೆ ಎಂದರು.
ಜಿಲ್ಲಾ ಕುಣಬಿ ಸಮಾಜ ಅಧ್ಯಕ್ಷ ಸುಭಾಷ್ ಗಾವಡಾ ಮಾತನಾಡಿ 10-10-2017 ರಲ್ಲಿ ರಾಜ್ಯ ಸರ್ಕಾರ ಕುಣಬಿ ಸಮಾಜ ಅಧ್ಯಯನ ವರದಿ ಸಚಿವ ಸಂಪುಟದಲ್ಲಿ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಿದೆ. 2019 ಮತ್ತು 2023 ಹೀಗೆ ನಿರಂತರವಾಗಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ನೆನಪಿನ ಓಲೆ ಬರೆದು ಆಗ್ರಹಿಸಿದ ಪತ್ರ ಸಮಾಜದ ಬಳಿ ಇದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಣಬಿ ಸಮಾಜ ಅಧ್ಯಕ್ಷ ಸುಭಾಷ್ ಗಾವಡಾ, ಜಿಲ್ಲಾ ಸದಸ್ಯ ಗಣಪತಿ ಕುಣಬಿ, ಹಿರಿಯ ಮುಖಂಡ ಪುಟ್ಟಾ ಕುಣಬಿ, ಜೊಯಿಡಾ ತಾಲೂಕು ಅಧ್ಯಕ್ಷ ಪ್ರೇಮಾನಂದ ವೆಳಿಪ, ಉಪಾಧ್ಯಕ್ಷ ಕೃಷ್ಣ ಮಿರಾಶಿ, ಮಾಜಿ ಕಾರ್ಯದರ್ಶಿ ಸುಭಾಷ್ ವೇಳಿಪ, ಕಾರ್ಯದರ್ಶಿ ದಯಾನಂದ ಕುಮಗಾಳಕರ, ಖಜಾಂಚಿ ದಿವಾಕರ ಕುಂಡಲಕರ, ಸದಸ್ಯ ಬಾಲಚಂದ್ರ ಮಿರಾಶಿ, ಮುಂತಾದವರು ಇದ್ದರು.
