ಸುದ್ದಿ ಕನ್ನಡ ವಾರ್ತೆ
ಜೊಯಿಡಾ ‘;ಭಾರತೀಯ ಜನತಾ ಪಾರ್ಟಿ ಜೋಯಿಡಾ ಮಂಡಲದ ವತಿಯಿಂದ ಇಂದು, ಸೋಮವಾರ ದಿನಾಂಕ 28/09/2026 ರಂದು ಜೋಯಿಡಾ ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತದಲ್ಲಿ ‘ನಮ್ಮ ಮನೆ ನಮ್ಮ ಹಕ್ಕು’ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಗ್ರಾಮ ಪಂಚಾಯತಿಗೆ ತೆರಳಿ, ಪಿ.ಡಿ.ಒ. ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಶೇಖರ ಸಾವರಕರ್ ಅವರು, ಅರಣ್ಯ, ಬೆಟ್ಟ, ಸರ್ಕಾರಿ ಭೂಮಿ, ಗ್ರಾಮಠಾಣ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ಮನೆಗಳ ಆಸ್ತಿ ತೆರಿಗೆ ಸ್ವೀಕಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಅರಣ್ಯ, ಸರ್ಕಾರಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ, ತಲೆತಲಾಂತರಗಳಿಂದ ವಾಸಿಸುತ್ತಿರುವ ಸಾವಿರಾರು ಕುಟುಂಬಗಳಿದ್ದು, ಸರ್ಕಾರದ ಈ ಕ್ರಮದಿಂದ ಅಂತಹ ಕುಟುಂಬಗಳಿಗೆ ತೊಂದರೆಯಾಗಲಿದೆ. ಜನಸಾಮಾನ್ಯರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಈ ಜನವಿರೋಧಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಪ್ರಮುಖರಾದ.ಆರ್. ವಿ.ದಾನಗೇರಿ ಶಶಿಕಾಂತ ಹೆಗಡೆ, ಸುದರ್ಶನ ಭಾಗ್ವತ್,ರಾಮನಾಥ ಎಲ್ಲೆಕರ,ಶೋಭಾ ಎಲ್ಲೆಕರ್, ಶ್ರೀಧರ ಭಾಗ್ವತ್, ಶ್ರೀಪಾದ್ ದೇಸಾಯಿ, ಶ್ರೀನಾಥ ದೇಸಾಯಿ, ಸೋಮಣ್ಣ ಕಾಡಪೊಡಕರ್, ಸಂದೀಪ್ ವೇಳಿಪ್ ಹಾಗೂ ಊರಿನ ಗ್ರಾಮಸ್ತರು ಬಿಜೆಪಿ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.
