ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಬೇಡ್ತಿ ವರದಾ ನದಿ ಜೋಡಣೆ ಯೋಜನೆ ಡಿಪಿಆರ್ ದಗಿತಗೊಳಿಸುವ ನಿರ್ಧಾರ ಕರ್ನಾಟಕ ಸರ್ಕಾರಕ್ಕೆ ಸೇರಿದ್ದು ಎಂದು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಸ್ಪಷ್ಟಪಡಿಸಿದೆ.
ಬೇಡ್ತಿ ವರದಾ ನದಿ ಜೋಡಣೆ ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಕೆಯನ್ನು ಅಮಾನತುಗೊಳಿಸುವ ನಿರ್ಧಾರವನ್ನು ಕರ್ನಾಟಕದ ರಾಜ್ಯ ಸರ್ಕಾರ ಮಾತ್ರವೇ ತೆಗೆದುಕೊಳ್ಳಲು ಸಾಧ್ಯ ಎಂದು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA )ಸ್ಪಷ್ಟಪಡಿಸಿದೆ.
ಉತ್ತರ ಕನ್ನಡದ ಡಾ. ರವಿಕಿರಣ್ ಪಟವರ್ಧನ್ ರವರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ NWDA. ನಿರ್ದೇಶಕ ಸಜಾತ್ ನನ್ ಕೆಎಚ್ ರವರು ದಿನಾಂಕ 3.11.2026ರಂದು ಈ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರದ ಕೋರಿಕೆಯಂತೆ ತುಂಗಭದ್ರಾ ಜಲಾಶಯದ ಬದಲಾಗಿ ಹಿರೇವಾಡಟ್ಟಿ ಗ್ರಾಮದಲ್ಲಿ ಸಂಗ್ರಹಣ ಜಲಾಶಯ ನಿರ್ಮಿಸಲು ಪ್ರಸ್ತಾವಿತ ಯೋಜನೆಯನ್ನು ಮಾರ್ಪಡಿಸಲಾಗಿದೆ. ಹಿರೇವಡಟ್ಟಿ ಜಲಾಶಯ ಆಧಾರಿತ ಪೂರ್ವ ಸಾಧ್ಯತೆ ವರದಿಯನ್ನು ಆಗಸ್ಟ್ 12 2025 ರಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಈ ಕುರಿತಂತೆ ಕರ್ನಾಟಕ ಸಮ್ಮತಿ ನೀಡಿದ್ದು 23.12.2025 ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಡಿಪಿಆರ್ ಯಾರಿಗಿ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಮಾಡಲಾಗಿದೆ.
ಪ್ರಸ್ತುತ ಡಿ ಪಿ ಆರ್ ತಯಾರಿಕಾ ಕೆಲಸ ಪ್ರಗತಿಯಲ್ಲಿದ್ದು, ಇದನ್ನು ತಡೆಹಿಡಿಯುವ ಅಥವಾ ಸ್ಥಗಿತಗೊಳಿಸುವ ಅಧಿಕಾರ ಸಂಪೂರ್ಣವಾಗಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಇದೆ ಎಂದು NWDA ತಿಳಿಸಿದೆ.
ಈ ಯೋಜನೆಗೆ ಅನುದಾನ ಒದಗಿಸುವ ಸ್ವರೂಪ ಅಥವಾ ವಿಷಯಗಳು ಯೋಜನೆಯ ಅನುಷ್ಠಾನದ ಹಂತದಲ್ಲಿ ನಿರ್ಧಾರವಾಗಲಿದೆ ಎಂದು ತಿಳಿಸಿದೆ.
