ಸುದ್ದಿ ಕನ್ನಡ ವಾರ್ತೆ
ಕಾರವಾರ: ತಾಲೂಕಿನ ಹಳೆಗಜೂಗದಿಂದ ಕಾರವಾರಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗಟಾರಕ್ಕೆ ಜಾರಿದ ಘಟನೆ ಬುಧವಾರ ಧೋಲ್ ನಲ್ಲಿ ನಡೆದಿದೆ.
ಹಳಗೆಜೂಗದಿಂದ ಕಾರವಾರಕ್ಕೆ ತೆರಳುತ್ತಿದ್ದ ರಾತ್ರಿ ವಸತಿ ಬಸ್ ಇದಾಗಿದ್ದು ಘಟನೆ ನಡೆದ ಕೂಡಲೇ ಬಸ್ ಚಾಲಕ ಸ್ಥಳೀಯ ಮುಖಂಡ ಕುಮಾರ ನಾಯ್ಕಗೆ ತಿಳಿಸಿದ್ದಾರೆ. ಕೂಡಲೆ ಸಹಾಯಕ್ಕೆ ಆಗಮಿಸಿದ ಕುಮಾರ ನಾಯ್ಕ ಸ್ಥಳದಲ್ಲಿ ಜೆಸಿಬಿ ವ್ಯವಸ್ಥೆ ಮಾಡಿಸಿದರು, ಜೆಸಿಬಿ ಮೂಲಕ ಸ್ಥಳೀಯರ ಸಹಾಯದೊಂದಿಗೆ ಬಸ್ ಸುರಕ್ಷಿತವಾಗಿ ಎಳೆದು ರಸ್ತೆಗೆ ತರಲಾಯಿತು.ಎಲ್ಲ ಖರ್ಚುವೆಚ್ಚವನ್ನು ಸ್ವತಃ ಕುಮಾರ ನಾಯ್ಕ ಮಾಡಿಸಿದ್ದು, ಸ್ಥಳೀಯರು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
