ಸುದ್ದಿ ಕನ್ನಡ ವಾರ್ತೆ

ದಿನಾಂಕ 20 ಫೆಬ್ರುವರಿ 2026 ರಂದು ಜೋಯಿಡಾ ತಾಲೂಕಿನ ಅವುರ್ಲಿ ಗ್ರಾಮದ ಶ್ರೀ ಸೋಮೇಶ್ವರ ದೇವರ ವಾರ್ಷಿಕೋತ್ಸವದ ನಿಮಿತ್ತ ಬೆಳಿಗ್ಗೆ 10 ಗಂಟೆಗೆ ಶ್ರೀ ಸೋಮೇಶ್ವರ ದೇವರ ಅಭಿಷೇಕ, ಸತ್ಯನಾರಾಯಣ ಪೂಜೆ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮ,
ಮಧ್ಯಾಹ್ನ 1:00 ಗಂಟೆಯಿಂದ ರಾತ್ರಿ 9:00ವರೆಗೆ ಅನ್ನಸಂತರ್ಪಣೆ ಮಾಡಲಾಗುವುದು.
ಅದೇ ದಿನ ರಾತ್ರಿ 9:00 ಗಂಟೆಗೆ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ
10:00 ಗಂಟೆಗೆ ಫಲ ಪುಷ್ಪ ಸವಾಲು ಕಾರ್ಯಕ್ರಮ ಜರುಗುವುದು.
11:00 ಗಂಟೆಗೆ ಸ್ಥಳೀಯ ಕಲಾವಿದರಿಂದ ಸುಂದರ ಸಾಮಾಜಿಕ ಕೌಟುಂಬಿಕ ಹಾಸ್ಯ ಭರಿತ, ರುದ್ರಮಯ ನಾಟಕ ನಡೆಯಲಿದೆ

ಹಣೆ ಬರಹಕ್ಕೆ ಹೊಣೆ ಯಾರು?

ಅರ್ಥಾತ್ : ಹೆಣ್ಣಿಗೆ ಶೀಲ ಸಿಂಗಾರ, ಗಂಡಿಗೆ ಬುದ್ದಿ ಬಂಗಾರ..

ಸ್ಥಳ : ಶ್ರೀ ಸೋಮೇಶ್ವರ ರಂಗ ಮಂದಿರ ಅವುರ್ಲಿ

ಎಲ್ಲರಿಗೂ ಸ್ವಾಗತ ಕೋರುವವರು- ಶ್ರೀ ಸೋಮೇಶ್ವರ ಟ್ರಸ್ಟ್ ಕಮಿಟಿ,
ಶ್ರೀ ಸೋಮೇಶ್ವರ ನಾಟ್ಯ ಮಂಡಳಿ,
ಶ್ರೀ ಸೋಮೇಶ್ವರ ಯುವ ಒಕ್ಕೂಟ ಹಾಗೂ ಊರ ಸಮಸ್ತ ನಾಗರಿಕರು ಅವುರ್ಲಿ.