Banner Ad

ಸುದ್ದಿ ಕನ್ನಡ ವಾರ್ತೆ

ಜೊಯಿಡಾ:ತಾಲೂಕಿನ ಕಾತೇಲಿ(ಕುಂಬಾರವಾಡಾ) ಗ್ರಾಮ ಪಂಚಾಯತ ವ್ಯಾಪ್ತಿಯ ಕುಂಡಲ ಗ್ರಾಮದ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ವಸತಿ ಬಸ್ ಸಂಚಾರ ಆರಂಭಿಸಿದ್ದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಹೋಗುವವಿದ್ಯಾರ್ಥಿಗಳಿಗೆ, ದಿನನಿತ್ಯದ ಕೆಲಸಕ್ಕೆ ಹೋಗುವ ಸಾರ್ವಜನಿಕರಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ. ಬಸ್ ಗೆ ಬಾಳೆ ಗಿಡ, ತಳಿರುತೋರಣ, ಹೂ ಮಾಲೆಯಿಂದ ಶೃಂಗರಿಸಿ ಗ್ರಾಮದ ಹಿರಿಯರು ಪೂಜೆ ಸಲ್ಲಿಸಿ,ಚಾಲಕ ಹಾಗೂ ನಿರ್ವಾಹಕರನ್ನು ಆತ್ಮೀಯವಾಗಿ ಸ್ವಾಗತಿಸಿ ಭವ್ಯವಾದ ಸ್ವಾಗತ ನೀಡಲಾಯಿತು. ಕುಂಡಲ ಗ್ರಾಮಕ್ಕೆ ವಸತಿ ಬಸ್ ಸಂಚಾರ ಸೇವೆ ಆರಂಭಿಸಿದ್ದಕ್ಕೆ ಗ್ರಾಮಸ್ಥರು ತಾಲೂಕಾ ಆಡಳಿತ,ಸಾರಿಗೆ ಇಲಾಖೆಯವರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಊರಿನ ಮಿರಾಶಿಗಳು, ಊರಿನ ಗಣ್ಯರು, ಹಿರಿಯರು,ಪುರುಷರು,ಮಹಿಳೆಯರು,ಯುವಕರು,ಯುವತಿಯರು,ವಿದ್ಯಾರ್ಥಿಗಳು,ಮಕ್ಕಳು ಇದ್ದರು.

Banner Ad
Banner Ad