Banner Ad

ಸುದ್ದಿ ಕನ್ನಡ ವಾರ್ತೆ

​ಯಕ್ಷಗಾನ ಹಾಗೂ ಹಿಂದೂಸ್ತಾನಿ ಸಂಗೀತ ಪರಂಪರೆಯ ಇಬ್ಬರು ಮೇರು ಸಾಧಕರನ್ನು ಉತ್ತರ ಕನ್ನಡ ಸಾಂಸ್ಕೃತಿಕ ಲೋಕ ಇಂದು ಕಳೆದುಕೊಂಡಿದೆ.ಎಂದು ಸಂಸದ ಕಾಗೇರಿ ಅವರು ಕಂಬನಿ ಮಿಡಿದಿದ್ದಾರೆ.

Banner Ad

​ತಮ್ಮ ಗಂಭೀರ ಕಂಠ, ಸ್ಪಷ್ಟ ವಾಕ್ಸರಣಿ ಹಾಗೂ ಸಾತ್ವಿಕ-ಪ್ರೌಢ ಪಾತ್ರಪೋಷಣೆಯ ಮೂಲಕ ರಂಗಕ್ಕೆ ಅಪೂರ್ವ ತೂಕ ತಂದುಕೊಟ್ಟ ಬಡಗುತಿಟ್ಟಿನ ದಿಗ್ಗಜ ಯಕ್ಷಕಲಾವಿದ ಶ್ರೀ ಶ್ರೀಪಾದ ಭಟ್ ಥಂಡಿಮನೆ ಹಾಗೂ ದಶಕಗಳ ಕಾಲ ನಾದೋಪಾಸನೆಯಲ್ಲೇ ಬದುಕನ್ನು ಸವೆಸಿ, ನೂರಾರು ಶಿಷ್ಯರಿಗೆ ವಿದ್ಯಾದಾನ ಮಾಡಿದ ಹಿರಿಯ ಸಂಗೀತ ತಪಸ್ವಿ ಪಂಡಿತ್ ನಾಗಭೂಷಣ ಹೆಗಡೆ ಬಾಳೆಹದ್ದ ಅವರ ಅಗಲಿಕೆ ಕಲಾಜಗತ್ತಿಗೆ ಎಂದೂ ತುಂಬಲಾರದ ನಷ್ಟ.

​ರಂಗಸ್ಥಳದ ಶಿಸ್ತು, ಕಲಾಪ್ರೌಢಿಮೆ ಮತ್ತು ಜೀವಿತಾವಧಿಯ ತಪಸ್ಸಿನಿಂದ ಈ ಇಬ್ಬರೂ ಹಿರಿಯರು ಉಳಿಸಿಹೋದ ಕಲಾ ಮೌಲ್ಯಗಳು ಸದಾ ಚಿರಸ್ಮರಣೀಯ.

​ದಿವಂಗತ ಪುಣ್ಯಾತ್ಮರಿಗೆ ಭಗವಂತನು ಸದ್ಗತಿಯನ್ನು ಕರುಣಿಸಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ವರ್ಗ, ಅಪಾರ ಶಿಷ್ಯರು ಹಾಗೂ ಕಲಾಭಿಮಾನಿಗಳಿಗೆ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ.ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರು ಉತ್ತರ ಕನ್ನಡ ಹೇಳಿದ್ದಾರೆ

Banner Ad