Banner Ad

ಸುದ್ದಿ ಕನ್ನಡ ವಾರ್ತೆ

ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನದಿಂದ ಚಿನ್ನ ಕಣ್ಮರೆಯಾಗಿದೆ ಎಂಬ ಸುದ್ದಿ ಹರಡಿದ ನಂತರ ಭಾರಿ ಆತಂಕ ಸೃಷ್ಟಿಯಾಗಿತ್ತು. ದೇವಸ್ಥಾನದ ರಚನೆಗೆ ಹಾನಿಯಾಗಿದೆ ಎಂಬ ಮಾಹಿತಿಯು ಇತ್ತು. ಈ ವದಂತಿಗಳನ್ನು ನಂಬಬೇಡಿ ಎಂದು ದೇವಸ್ಥಾನ ಟ್ರಸ್ಟ್ ಮನವಿ ಮಾಡಿದೆ. ಈ ಎರಡು ವದಂತಿಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ಭಕ್ತರ ದಾರಿ ತಪ್ಪಿಸುವಂತಿದೆ ಎಂದು ವಿವರಿಸಿದೆ. ದೇವಸ್ಥಾನದ ಹಾನಿಗೊಳಗಾದ ಶಿಖರವನ್ನು ದೇವಸ್ಥಾನದ ಲಾಕರ್ ನಲ್ಲಿ ಸುರಕ್ಷಿತವಾಗಿ ಇಡಲಾಗಿದೆ ಎಂದು ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ಸ್ಪಷ್ಟಪಡಿಸಿದೆ.

Banner Ad

ದೇವಸ್ಥಾನದಲ್ಲಿನ ಚಿನ್ನ ಮತ್ತು ದೇವಸ್ಥಾನದ ವಾಸ್ತುಶಿಲ್ಪದ ಸ್ಥಿತಿಯ ಬಗ್ಗೆ ಹರಡುತ್ತಿರುವ ವದಂತಿಗಳನ್ನು ಈ ಕಾಶಿ ವಿಶ್ವನಾಥ ದೇವಾಲಯ ಟ್ರಸ್ಟ್ ಮಾಹಿತಿ ನೀಡಿದೆ. ದೇವಸ್ಥಾನದಿಂದ ಚಿನ್ನ ಕಣ್ಮರೆಯಾದ ಹೇಳಿಕೆ ಮತ್ತು ದೇವಸ್ಥಾನದ ರಚನೆಗೆ ಹಾನಿಯಾದ ಸುದ್ದಿ ಸತ್ಯಗಳಿಗೆ ದೂರವಾಗಿದೆ ಎಂದು ಹೇಳಿದೆ.

ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ದೇಶದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಪ್ರತಿ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದರ್ಶನಕ್ಕೆ ಇಲ್ಲಿಗೆ ಆಗಮಿಸುತ್ತಾರೆ. ಆದ್ದರಿಂದ ದೇವಸ್ಥಾನದ ಬಗ್ಗೆ ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಒದಂತಿಗಳನ್ನು ಹೋಗಲಾಡಿಸಲು ಟ್ರಸ್ಟ್ ಈ ಮಾಹಿತಿ ನೀಡಿದೆ.

ದೇವಸ್ಥಾನದ ಹಾನಿಗೊಳಗಾದ ಶಿಖರವನ್ನು ದೇವಸ್ಥಾನದ ಲಾಕರ್ ನಲ್ಲಿ ಸುರಕ್ಷಿತವಾಗಿ ಇಡಲಾಗಿದೆ ಎಂದು ದೇವಸ್ಥಾನ ಟ್ರಸ್ಟ್ ಸ್ಪಷ್ಟಪಡಿಸಿದೆ.

Banner Ad