Banner Ad

ಸುದ್ದಿ ಕನ್ನಡ ವಾರ್ತೆ

ಅಹಮದಬಾದ್:ಸಾಬರಮತಿ ತಟದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧದ ಜಯದ ನಂತರ,ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣ X ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

Banner Ad

ಭಾರತ ತಂಡದ “ಅಸಾಧಾರಣ ಕೌಶಲ್ಯ, ದೃಢಸಂಕಲ್ಪ ಮತ್ತು ಒಗ್ಗಟ್ಟಿನ” ಪ್ರದರ್ಶನವನ್ನು ಶ್ಲಾಘಿಸಿದ ಅವರು, ಈ ವಿಜಯವು ಪ್ರತಿ ಭಾರತೀಯನ ಹೃದಯವನ್ನು ಹೆಮ್ಮೆ ಮತ್ತು ಸಂತೋಷದಿಂದ ತುಂಬಿದೆ ಎಂದು ಬಣ್ಣಿಸಿದ್ದಾರೆ.ಟೀಮ್ ಇಂಡಿಯಾವನ್ನು
ಚಾಂಪಿಯನ್ಸ್ ಎಂದು ಕರೆದು, ಪೂರ್ಣಾವಧಿ ಅಜೇಯರಾಗಿ ಉಳಿದಿದ್ದಕ್ಕಾಗಿ ಪ್ರಶಂಸಿಸಿದರು.
ಆಟಗಾರರ ದೃಢಸಂಕಲ್ಪ
ಮತ್ತು ಅದ್ಭುತ ಆಟವನ್ನು ಶ್ಲಾಘಿಸಿದ ಅವರು, ಇದು ಇತಿಹಾಸ ನಿರ್ಮಿಸಿದ ಗೆಲುವು,ತಂಡದ ಯಶಸ್ಸಿನಲ್ಲಿ ಆಟಗಾರರ ಒಗ್ಗಟ್ಟು ಮತ್ತು ಸಾಮೂಹಿಕ ಪ್ರಯತ್ನ ಪ್ರಮುಖ ಪಾತ್ರ ವಹಿಸಿದೆ, ಈ ಗೆಲುವು 140 ಕೋಟಿ
ದೇಶವಾಸಿಗಳಿಗೆ ಹೆಮ್ಮೆ ತಂದಿದೆ, ಇದು ಕೇವಲ ಕ್ರೀಡಾ ಜಯವಲ್ಲ, ಭಾರತದ ಹೃದಯಗಳನ್ನು ಗೆದ್ದ ಕ್ಷಣ ಎಂದು ಬಣ್ಣಿಸಿದ್ದಾರೆ.

Banner Ad