ಸುದ್ದಿ ಕನ್ನಡ ವಾರ್ತೆ
ಬೈಲಹೊಂಗಲ-ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಯಮಕನಮರಡಿ ಹೋಬಳಿಯ ಬೋಳಶಾನಟ್ಟಿ ಗ್ರಾಮದ ಗಣ್ಯ ಮನೆತನದ 5 ವರ್ಷದ ಬಾಲಕಿ ಖುಷಿ ಶಿವಾನಂದ ಮಗದುಮ ಇವಳು ವಚನ ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮ ಸ್ಥಾನಗಳಿಸಿದಕ್ಕಾಗಿ ಬೆಂಗಳೂರಿನ ಕೇಂದ್ರ ಬಸವ ಸಮಿತಿಯ ವತಿಯಿಂದ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಅವರು ಬೈಲಹೊಂಗಲ ಪಟ್ಟಣದ ಬೆಳಗಾವಿ ರಸ್ತೆಯಲ್ಲಿರುವ ಗ್ಯಾಲಾಕ್ಸಿ ಗಾರ್ಡನ್ ಆವರಣದಲ್ಲಿ ರಾಷ್ಟ್ರೀಯ ಪುರಸ್ಕೃತರಾದ ಖ್ಯಾತ ಸಾಹಿತಿ ಡಾ.ಎಂ.ಎಂ.ಕಲ್ಬುರ್ಗಿಯವರು ಸಂಪಾದಿಸಿದ ವಚನ ಗ್ರಂಥ ಅರ್ಪಿಸಿ ಗೌರವಿಸಿದರು.
ಖ್ಯಾತ ಜಾನಪದ ಕಲಾವಿದ,ಉದಯೋನ್ಮುಖ ಬರಹಗಾರ,ಕವಿ ಮಹಾಂತೇಶ ಶಿವಪ್ಪ ಮುದಕನಗೌಡರ,ಬೈಲವಾಡದ ಭುವನೇಶ್ವರಿ ಪೌಂಡೇಶನ್ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಬಸವರಾಜ ಮುದಕನಗೌಡರ,ಶ್ರೀಮತಿ ಲಕ್ಷ್ಮೀ ಶಿವಾನಂದ ಮಗದುಮ, ಕೃತಿ ಮಹಾಂತೇಶ ಮುದಕನಗೌಡರ, ಸಾನ್ವಿ ಸತೀಶ ಶಿಂತ್ರಿ ಉಪಸ್ಥಿತರಿದ್ದರು.
ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಬಸವರಾಜ ರಮೇಶ ಬಾಳೇಕುಂದರಗಿ,ಕೆ.ಎಲ್.ಇ.ಸಂಸ್ಥೆಯ ಅಧ್ಯಕ್ಷರಾದ,ಶಾಸಕ ಮಹಾಂತೇಶ ಶಿವಾನಂದ ಕೌಜಲಗಿ, ಕಿತ್ತೂರ ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರಾದ,ಮಾಜಿ ಶಾಸಕ ಡಾ.ವಿಶ್ವನಾಥ ಈರನಗೌಡ ಪಾಟೀಲ,ಖ್ಯಾತ ಹೋಟೆಲ ಉದ್ದಿಮೆದಾರರಾದ ಮಹಾಂತೇಶ ಎಸ್.ಪಾಟೀಲ,ಜಾನಪದ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ರುದ್ರಪ್ಪ ಕೊಪ್ಪದ, ಶರಣ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲ್ಲೂಕಿನ ಅಧ್ಯಕ್ಷರಾದ ಸಂತೋಷ ಚಂದ್ರಪ್ಪ ಕೊಳವಿ,ಉಪಾಧ್ಯಕ್ಷರಾದ ಶ್ರೀಶೈಲ ಉಳವಪ್ಪ ಶರಣಪ್ಪನವರ,ಜಾಗತಿಕ ಲಿಂಗಾಯತ ಮಹಾಸಭಾದ ಬೈಲಹೊಂಗಲ ನಗರ ಘಟಕದ ಅಧ್ಯಕ್ಷರಾದ ಮಹೇಶ ವೀರಭದ್ರಪ್ಪ ಕೋಟಗಿ(ಉಡಿಕೇರಿ)ಮುಂತಾದ ಗಣ್ಯರು ಅಭಿನಂದಿಸಿ,ಶುಭ ಕೋರಿದ್ದಾರೆ.
