Banner Ad

ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ
ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಪ್ರಕಾಶ ನಾಯಕ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.ಈಚೆಗೆ ಸ್ವ-ಯಂ ನಿವೃತ್ತಿ ಪಡೆದಿದ್ದ ಅವರು ಬುಧವಾರ ದುಡುಕು ನಿರ್ಧಾರಕ್ಕೆ ಒಳಗಾಗಿದ್ದಾರೆ.

ಅಂಕೋಲಾ ತಾಲೂಕಿನ ಮೊಗಟಾದ ಪ್ರಕಾಶ ನಾಯಕ ಅವರು ಯಲ್ಲಾಪುರದಲ್ಲಿಯೇ ಮನೆ ಮಾಡಿದ್ದರು. ಅವರ ಪತ್ನಿ ಭಾರತಿ ನಾಯಕ ಅವರು ಸಹ ಶಿಕ್ಷಕರಾಗಿದ್ದು, ಪ್ರಕಾಶ ನಾಯಕ ಅವರು ಹೆಮ್ಮಾಡಿ, ಕುಂದರಗಿ, ಬಾಳೆಗದ್ದೆ, ಡೊಮಗೇರಿ ಹಾಗೂ ಕೆಜಿಎಸ್ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು. ಕೆಲಕಾಲ ಸಂಪನ್ಮೂಲ ಅಧಿಕಾರಿಯಾಗಿಯೂ ಪ್ರಕಾಶ ನಾಯಕ ಅವರು ಕೆಲಸ ಮಾಡಿದ್ದರು. ಯುವಜನ ಸೇವಾ ಕ್ರೀಡಾಧಿಕಾರಿಯಾಗಿ ಅವರು ಅತ್ಯಂತ ಉತ್ಸಾಹದಿಂದ ದುಡಿದಿದ್ದರು. ಸರ್ಕಾರಿ ನೌಕರರ ಸಂಘದ ತಾಲೂಕು ಅವರು ಅಧ್ಯಕ್ಷರಾಗಿಯೂ ಶ್ರಮಿಸಿದ್ದರು.
ಮೂರು ದಶಕಗಳಿಂದ ಅವರು ಶೈಕ್ಷಣಿಕ ಸೇವೆಯಲ್ಲಿದ್ದರು.ಸ್ವಯಂ ನಿವೃತ್ತಿಪಡೆದಿದ್ದರು. ಬುಧವಾರ ಬೆಳಗ್ಗೆ ಮನೆಯಲ್ಲಿಯೇ ಇದ್ದ ಪ್ರಕಾಶ ನಾಯಕ ಅವರು ದಿಡೀರ್ ಆಗಿ ದುಡುಕು ನಿರ್ಧಾರಕ್ಕೆ ಒಳಗಾದರು.

Banner Ad

ನೇಣಿಗೆ ಶರಣಾದ ಅವರನ್ನು ತಕ್ಷಣ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಯಿತು.ಆದರೆ ಅದರಿಂದ ಪ್ರಯೋಜನ ಆಗಲಿಲ್ಲ. ಆಸ್ಪತ್ರೆಗೆ ತೆರಳುವ ಮುನ್ನವೇ ಪ್ರಕಾಶ ನಾಯಕ ಅವರು ಕೊನೆಯುಸಿರೆಳೆದರು.ಅವರ ಈ ದುಡುಕು ನಿರ್ಧಾರಕ್ಕೆ ಸ್ಪಷ್ಟ ಕಾರಣ ಗೊತ್ತಾಗಲಿಲ್ಲ.

Banner Ad