Banner Ad

ಸುದ್ದಿ ಕನ್ನಡ ವಾರ್ತೆ
ಸಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಥಂಡಿಮನೆಯ ಖ್ಯಾತ ಯಕ್ಷಗಾನ ಕಲಾವಿದ ಶ್ರೀಪಾದ್ ಭಟ್ ಥಂಡಿಮನೆ ನಿಧನರಾಗಿದ್ದಾರೆ.

ಬಡಗುತ್ತಿಟ್ಟಿನ ಯಕ್ಷಗಾನ ಕಲಾವಿದರಾದ ಇವರು ಉತ್ತಮ ವೇಷಗಾರಿಕೆ, ನಿಲುವು, ಅಭಿನಯ, ನೃತ್ಯಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದರು. ಪೆರ್ಡೂರು, ಸಾಲಿಗ್ರಾಮ ಸೇರಿದಂತೆ ವಿವಿಧ ಯಕ್ಷಗಾನ ಮೇಳಗಳಲ್ಲಿ ನಡೆಯುವ ಯಕ್ಷಗಾನಗಳಲ್ಲಿ ಪಾತ್ರ ನಿರ್ವಹಿಸಿದ್ದರು.

Banner Ad

62 ವಯಸ್ಸಿನ ಇವರು ಮಂಗಳೂರಿನ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ.

Banner Ad