Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಕಾರಟೋಲಿಯಲ್ಲಿ ಸಡಗರ ಸಂಭ್ರಮದಿಂದ 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

Banner Ad

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ರಾದ ಶಾಂತಕುಮಾರ ಎಸ್.ಕೆ ನಮ್ಮ ಕನ್ನಡ ನಾಡಿನ ಭಾಷೆ,ನೆಲ,ಜಲ,ಕರ್ನಾಟಕ ಏಕೀಕರಣದ ವಿಷಯದ ಕುರಿತು ಮಾತನಾಡಿದರು,ಸಹ ಶಿಕ್ಷಕಿಯಾದ ರಮ್ಯಾ ಮುಕ್ರಿ ಕಾರ್ಯಕ್ರಮದಲ್ಲಿ ಸ್ವಾಗತಿಸಿ,ನಿರೂಪಿಸಿ,ವಂದಿಸಿದರು.ಶಾಲೆಯ ವಿದ್ಯಾರ್ಥಿಗಳು ಕನ್ನಡದ ಗೀತೆಗಳನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವಿನೋದ ವೇಳಿಪ,ಸದಸ್ಯರು,ಪಾಲಕರು,ಪೋಷಕರು,ಅಂಗನವಾಡಿ ಕಾರ್ಯಕರ್ತೆ,ಆಶಾ ಕಾರ್ಯಕರ್ತೆ,ಮಕ್ಕಳು ಇದ್ದರು.

Banner Ad