Banner Ad

ಸುದ್ದಿ ಕನ್ನಡ ವಾರ್ತೆ

ಜೊಯಿಡಾ=ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸoಹಿತೆಗಳು, ವಿ ಬಿ ಗ್ರಾಮ ಕಾಯ್ದೆ -2025, ವಿದ್ಯುತ್ ಶಕ್ತಿ ತಿದ್ದುಪಡಿ ಮಸೂದೆ -2025, ಶಾಂತಿ ಕಾಯ್ದೆ -2025, ಅಮೆರಿಕಾದ ಭಾರತ ವಾಣಿಜ್ಯ ಒಪ್ಪಂದ ರದ್ಧತಿಗಾಗಿ, ಸ್ಕೀಂ ನೌಕರರಿಗೆ ಕನಿಷ್ಠ ವೇತನ ಕಾಯ್ದೆ ಜಾರಿಗಾಗಿ, ಅರಣ್ಯ ಭೂಮಿ ಹಕ್ಕಿಗಾಗಿ, ಆದಿವಾಸಿ ಕುಣಬಿ ಜನಾಂಗವವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಒತ್ತಾಯಿಸಿ ಜೊಯಿಡಾಯಲ್ಲಿ ಕೇಂದ್ರ ಸರ್ಕಾರದ ನೀತಿ ವಿರುದ್ಧ ಅಖಿಲ ಭಾರತ ಸಾರ್ವತ್ರಿಕಮುಷ್ಕರದ ಭಾಗವಾಗಿ ವಿವಿಧ ಸಂಘಟನೆಗಳು ಸೇರಿ ಮೆರವಣಿಗೆ ಮೂಲಕ ಶಿವಾಜಿ ಸರ್ಕಲ್ ನಲ್ಲಿ ಬಹಿರಂಗ ಸಭೆ ನಡೆಸಿ ಪ್ರತಿಭಟನೆ ನಡೆಸಿದರು.

Banner Ad

ಈ ಸಂಧರ್ಭದಲ್ಲಿ ನಾಲ್ಕು ಕಾರ್ಮಿಕ ಕಾನೂನು ಹಿಂಪಡೆಯಬೇಕು, ಮನರೆಗಾ ಹೆಸರು ಬದಲಾವಣೆ ಮಾಡುವ ಬದಲಿಗೆ ಬಡವರ ದಿನಕೂಲಿ ಹಾಗೂ ಕೆಲಸದ ದಿನಗಳು ಹೆಚ್ಚಿಸಬೇಕು, ಆದಿವಾಸಿ ಕುಣಬಿ ಜನಾಂಗವವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು,ಬಡವರ ಅತಿಕ್ರಮಣ ಭೂಮಿ ಸಕ್ರಮಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕ ಅಧ್ಯಕ್ಷ ಪ್ರೇಮಾನಂದ ವೆಲಿಪ್ ಮಾತನಾಡಿದರು.

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕರಿಗೆ ಬೆಲೆ ಏರಿಕೆಯ ಆಧಾರದಲ್ಲಿ ಕನಿಷ್ಠ ವೇತನ ಜಾರಿ ಮಾಡಬೇಕು. ಅಂಗನವಾಡಿ ಕೇಂದ್ರದಲ್ಲಿ LKG-UKG ಪ್ರಾರಂಭಿಸಬೇಕು ಎಂದು ಅಂಗನವಾಡಿ ಸಂಘಟನೆಯ ತಾಲೂಕ ಅಧ್ಯಕ್ಷರಾದ ಶ್ರೀಮತಿ ಮಂಗಳಾ ಕಾಂಬಳೆ ಹೇಳಿದರು.
ಪ್ರತಿಭಟನೆಯಲ್ಲಿ ಪ್ರೇಮಾನಂದ ವೆಲಿಪ್, ಮಂಗಳಾ ಕಾಂಬಳೆ, ರೂಪಾ ಸಾವಂತ, ರಾಜೇಶ ಗಾಂವ ಡಾ, ಗೀತಾ ನಾಯ್ಕ, ಅನಿತಾ ಚೌಧರಿ, ಅಕ್ಷತಾ ಇಂಗಳೆ, ದೀಪಾ,ಸಂಜನಾ, ದಾಕ್ಷಾಯಣಿ, ಆಶಾ, ಕಲ್ಪನಾ, ಜತಿಕಾ, ಆನಂದಿ, ಪೇರ್ ಪೇರ್ ಪೇತ, ಗೀತಾ ಕಾಂತ್ರಿಕಾರ ಹಾಗೂ ನೂರಾರು ಮಹಿಳೆಯರು ಉಪಸ್ತಿತರಿದ್ದರು.

Banner Ad