ಸುದ್ದಿ ಕನ್ನಡ
ಜೊಯಿಡಾ: ತಾಲೂಕಿನ ಗಾವಡೆವಾಡಾದಲ್ಲಿ ಜಾನಪದ ಸೊಗಡಿನ ಖಾಪ್ರಿ ದೇವತಾರ ಜಾತ್ರೆ ಬೆಳಗ್ಗೆ ಇಂದಲೇಆರಂಭ ವಾಗಿ ಜಾನಪದ ಹಾಡುಗಳನಾದ ಮೊಳಗಿತ್ತು. ಮಧ್ಯಾಹ್ನ ಖಾಪ್ರಿ ದೇವತಾರ ಬುಧವಂತನ ಮನೆ ಅಂಗಳದಲ್ಲಿ ಇರುವ ತುಳಸಿ ಕಟ್ಟೆಗೆ ಪ್ರದಕ್ಷಿಣೆ ಹಾಕಿ, ಹೇರಿಕೆಯ ಕಂಬಳಿ ಸ್ವೀಕರಿಸಿ ಸೇರಿದ ಭಕ್ತರಿಗೆ ದರ್ಶನ ನೀಡಿದ ನಂತರ ವಾರ್ಷಿಕ ಜಾತ್ರೆ ಸಂಪನ್ನಗೊಂಡಿತು.

ಬೆಳಿಗ್ಗೆ ಆಗುತ್ತಲೇ ಸೂರ್ಯ ದೇವರಿಗೆ ಸಂಬಂಧಿಸಿದ ಜಾನಪದ ಹಾಡುಗಳನ್ನು ಹಾಡಲಾಯಿತು. ರಾಮಾಯಣ, ಮಹಾಭಾರತ ಪುರಾಣ ಪ್ರಸಂಗ ಕೊಂಕಣಿ ಜಾನಪದ ಹಾಡಿನ ಮೂಲಕ ವರ್ಣನೆ ಮಾಡಲಾಯಿತು. ಹಾಡಿನ ಮಧ್ಯೆ ಖಾಪ್ರಿ ದೆವರ ಭಕ್ತರು ಹರಕೆ ರೂಪದಲ್ಲಿ ನೀಡುವ ಕಂಬಳಿಯನ್ನು ಒಂದೊಂದಾಗಿ ನೀಡಲು ಆರಂಭಿಸಿದರು. ಸಾವಿರಾರು ಕಂಬಳಿಗಳು ಜಮಾವಣೆಗೊಂಡಿತು.
ಮಧ್ಯಾಹ್ನ ಆಗುತ್ತಲೇ ಖಾಪ್ರಿ ದೇವರ ಜಾನಪದ ಹಾಡು ಕೊಂಕಣಿ ಭಾಷೆಯಲ್ಲಿ ಹಾಡಲು ಪ್ರಾರಂಭಿಸಿದರು. ಆಗ ಖಾಪ್ರಿ ದೇವರು ಒಂದು ಮನೆಯ ಒಳಗಿನಿಂದ, ಇನ್ನೊಂದು ಗ್ರಾಮದ ಹೊರಗಿನಿಂದ ತುಳಸಿ ಅಂಗಳದಲ್ಲಿ ಬಂದು ಜಾನಪದ ಹಾಡಿಗೆ ಹೆಜ್ಜೆ ಹಾಕಲು ಪ್ರಾರಂಭಿಸಿದರು. “ಆಸಕ್ಯಾ ಉಸಕ್ಯಾನಿ ಖಾಪ್ರಿ ಖಯಲೊ ಪುಸಕಾನಿ” ಅಂದರೆ ತನ್ನ ಭಕ್ತರನ್ನು ಕಾಪಾಡಲು ಸದಾ ಚಿಂತೆಯಲ್ಲಿ ಇರುವುದು ಎಂದು ಜಾನಪದದ ಅರ್ಥ ಆಗಿದೆ. ಹೀಗೆ ಬೇರೆಯವರ ಬಗ್ಗೆ ಯಾವಾಗಲೂ ಚಿಂತೆ ಮಾಡುವ ದೇವರಾಗಿ ದ್ದರಿಂದ ಭಕ್ತರು ಬೇಡಿದ್ದನ್ನು ಸಿದ್ದಿಸಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಕಂಬಳಿ ಹರಕೆ ರೂಪದಲ್ಲಿ ಬಂದಿದ್ದಕ್ಕೆ ಸಾಕ್ಷಿಯಾಗಿದೆ ಎಂದು ನಂಬಲಾಗಿದೆ.

ಭಾರಿ ಜನಸ್ತೋಮ ಜಾಗೆಯ ಅಭಾವ
ಖಾಪ್ರಿ ದೇವತಾರ ಜಾತ್ರೆಗೆ ವರ್ಷದಿಂದ ವರ್ಷಕ್ಕೆ ಭಕ್ತರು ಬರುವ ಸಂಖ್ಯೆ ಹೆಚ್ಚುತ್ತಲೇ ಇದೆ. ರಸ್ತೆಯ ಉದ್ದಕ್ಕೂ ವ್ಯಾಪಾರಸ್ಥರು ಅಂಗಡಿ ಹಾಕಿದ್ದರಿಂದ ಓಡಾಟಕ್ಕೆ ತುಂಬಾ ತೊಂದರೆ ಆಗಿತ್ತು. ನೂಕು ನುಗ್ಗಲು ಆಗಿದ್ದರಿಂದ ಕಾಲ್ತುಳಿತ ಆಗುವ ಸಾಧ್ಯತೆ ಇತ್ತು . ಐಸ್ ಕ್ರೀಮ್ ವಾಹನಗಳಜನರು , ಮರದ ಮೇಲೆ ಹತ್ತಿ ಖಾಪ್ರಿ ದೇವರನ್ನು ನೋಡುತ್ತಿದ್ದ ದೃಶ್ಯ ಕಂಡುಬಂತು.
ಭಾರಿ ವ್ಯಾಪಾರ
ಅಂಗಡಿಗಳಲ್ಲಿ ಮಾರಾಟ ಬಲು ಜೋರು ಇತ್ತು. ಸಾವಿರಾರು ಸಂಖ್ಯೆಯಲ್ಲಿ ಕಂಬಳಿ ಮಾರಾಟ ಬಲು ಜೋರಾಗಿಯೇ ನಡೆಯಿತು. ಮಿಠಾಯಿ, ಖಾಜೆ, ಮಕ್ಕಳ ಆಟಿಕೆ, ಬಟ್ಟೆ, ಜರಕಿನ್ ಭಾರಿ ವ್ಯಾಪಾರ ನಡೆಯಿತು.
ಕೊನೆಯಲ್ಲಿ ಪ್ರಸಾದ್ ಹಂಚಿಕೆ
ದೇವರಿಗೆ ಕಂಬಳಿ ಹರಕೆ ಆದರೆ ಚುರಮುರಿ (ಮಂಡಕ್ಕಿ )ಪ್ರಸಾದ ಮಾಡಲಾಗುತ್ತದೆ. ಭಕ್ತರು ಭಕ್ತಿಯಿಂದ ನೀಡಿದ ಚುರಮುರಿ ರಾಸಿಯೇ ಬಿದ್ದಿತ್ತು ಕೊನೆಯಲ್ಲಿ ದೇವರ ಪ್ರಸಾದ ಸವಾಲುಗಳು ನಡೆದವು ವಿವಿದೆಡೆಯಿಂದ ಬಂದ ಸಾವಿರಾರು ಜನರು ಜಾತ್ರೆಯಲ್ಲಿ ದರ್ಶನ ಪಡೆದು ಪುನೀತ ರಾದರು.
